ಪ್ರೀತಿಯೊಂದು ಆಕಾಶ

ಸಿಂದು ಬಾರ‍್ಗವ್.

ಪ್ರೀತಿಯೊಂದು ಆಕಾಶ
ಅಲ್ಲಿ ಪ್ರೀತಿಗೆ ಮಾತ್ರ ಅವಕಾಶ
ನಿನ್ನ ತೋಳಿನಲೇ ಒರಗಿ
ಕಾಣಬೇಕು ನೂರು ಕನಸಾ

ಮರಳ ಮೇಲೆ ಅಲೆಗಳು
ಕೆನ್ನೆ ಸವರಿ ಹೋಗಲು
ಮನದಲ್ಲಿರುವ ಪ್ರೀತಿಯ
ತೇವ ಮಾತ್ರ ಇಂಗದು

ಅರಿತಿರದ ನಾಳೆಯಲಿ
ದಿನದಿನವೂ ಅನುಬವವು
ನೀ ನನ್ನ ಜೊತೆಗಿರಲು
ಬಲವಾಗುವುದು ಮನವು

ಕಡಲಿನಾಳದಿಂದ ಮುತ್ತನು
ನಿನಗಾಗಿ ಹುಡುಕಿ ತಂದೆ
ನನ್ನ ದಣಿದ ಮೊಗವ ನೋಡಿ
ನೀನೆ ಮುತ್ತೊಂದ ನೀಡಿದೆ

ಕನಸು ಕಾಣಲು ಕಾಸಿಲ್ಲವೆಂದು
ಯಾರೋ ಮಾಡಿದ್ದರು ಉಪನ್ಯಾಸ
ನಿನ್ನ ಪ್ರೀತಿ ಮಾಡಿದಂದಿನಿಂದ
ಕಂಗಳಿಗಿಲ್ಲ ಉಪವಾಸ

ಒಂದೇ ಒಂದು ಆಸೆ ಎನಗೆ
ತರಬೇಕಿಲ್ಲ ನೂರಾರು ಒಡವೆ
ಬದುಕಿನ ಕೊನೆವರೆಗೂ
ಈ ಕಿರುಬೆರಳ ಬಿಡದಿರು ಮುದ್ದುಮನವೇ

(ಚಿತ್ರ ಸೆಲೆ: pexels.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. K.V Shashidhara says:

    ಸೊಗಸಾಗಿದೆ.

ಅನಿಸಿಕೆ ಬರೆಯಿರಿ: