ಕಾರಾಬಾತ್ ಅನ್ನು ಮಾಡಬಹುದು ಹೀಗೆ!

– ಕಲ್ಪನಾ ಹೆಗಡೆ.

ಕಾರಾಬಾತ್, ಉಪ್ಪಿಟ್ಟು, Kharabath, Uppittu

ಏನೇನು ಬೇಕು?

 • 3 ಪಾವು ಬನ್ಸಿರವೆ
 • 1/4 ಕೆ.ಜಿ. ಹುರುಳಿಕಾಯಿ
 • 4 ಹಸಿಮೆಣಸಿನಕಾಯಿ
 • 4 ಡೊಣ್ಣಮೆಣಸಿನಕಾಯಿ
 • 2 ಟೊಮೇಟೊ
 • 2 ಚಮಚ ಉದ್ದಿನ ಬೇಳೆ
 • 2 ಚಮಚ ಕಡ್ಲೆ ಬೇಳೆ
 • 6 ಚಮಚ ಬಾತ್ ಪೌಡರ್
 • ಇಂಗು
 • ಕರಿಬೇವು
 • ಕಾಯಿತುರಿ

ಮಾಡೋದು ಹೇಗೆ?

ಮೊದಲು ರವೆಯನ್ನು ಬಾಣಲೆಗೆ ಹಾಕಿ ಹುರಿದುಕೊಳ್ಳಬೇಕು. ಆನಂತರ ಬಾಣಲೆಗೆ  ಎಣ್ಣೆ ಹಾಕಿ. ಎಣ್ಣೆ ಕಾದ ನಂತರ ಸಾಸಿವೆ, ಉದ್ದಿನಬೇಳೆ, ಕಡ್ಲೆಬೇಳೆ, ಹಸಿಮೆಣಸಿನಕಾಯಿ, ಅರಿಶಿನ ಪುಡಿ, ಇಂಗು ಹಾಕಿ ಹುರಿದು ಅದಕ್ಕೆ ಹೆಚ್ಚಿಟ್ಟ ಡೊಣ್ಣಮೆಣಸಿನಕಾಯಿ, ಟೊಮೇಟೊ, ಹೆಚ್ಚಿದ ಇರುಳ್ಳಿ ಹಾಕಿ ಸ್ವಲ್ಪ ಹುರಿಯಿರಿ. ನಂತರ ಒಂದು ಪಾವಿಗೆ 2 ಲೋಟ ನೀರಂತೆ ಹಾಕಿ, ಬಾತ್ ಪೌಡರ್ ಮತ್ತು ರುಚಿಗೆ ತಕ್ಕಶ್ಟು ಉಪ್ಪು ಹಾಕಿ ಕುದಿಸಿಕೊಳ್ಳಿ. ಬಳಿಕ ಹುರಿದಿಟ್ಟ ರವೆಯನ್ನು ಹಾಕಿ 1 ನಿಮಿಶ ಪ್ಲೇಟಿನಿಂದ ಮುಚ್ಚಿಟ್ಟುಕೊಳ್ಳಿ. ಆಮೇಲೆ ಕಾಯಿ ತುರಿ ಹಾಗೂ 2 ಚಮಚ ತುಪ್ಪ ಹಾಕಿ ಚೆನ್ನಾಗಿ ಮಿಕ್ಸ ಮಾಡಿಕೊಳ್ಳಿ. ಈಗ ಕಾರಾಬಾತ್ ತಯಾರು 🙂

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: