ಕಾಂದಾ ಬಜಿ ಮತ್ತು ಹಸಿರು ಚಟ್ನಿ

ಸವಿತಾ.

ಕಾಂದಾ ಬಜಿ ಮತ್ತು ಹಸಿರು ಚಟ್ನಿ, Kanda Baji Green Chutney

ಕಾಂದಾ ಬಜಿ ಮಾಡಲು ಏನೇನು ಬೇಕು?

2 ಈರುಳ್ಳಿ
1 ಬಟ್ಟಲು ಕಡಲೆ ಹಿಟ್ಟು
1 ಚಮಚ ಇಲ್ಲವೇ  ರುಚಿಗೆ ತಕ್ಕಶ್ಟು ಉಪ್ಪು
1 ಚಮಚ ಒಣ ಕಾರ
1/4 ಚಮಚ ಜೀರಿಗೆ
1/4 ಚಮಚ ಓಂ ಕಾಳು
1/4 ಚಮಚ  ಅಡುಗೆ ಸೋಡಾ

ಬಜಿ ಮಾಡುವ ಬಗೆ

ಈರುಳ್ಳಿಯನ್ನು ಸಣ್ಣಗೆ ಕತ್ತರಿಸಿ. ಜೀರಿಗೆ, ಓಂ ಕಾಳು, ಉಪ್ಪು ಸೇರಿಸಿ ಪುಡಿ ಮಾಡಿ ಕಡಲೇ ಹಿಟ್ಟಿಗೆ ಸೇರಿಸಿ. ಸ್ವಲ್ಪ ಕಾದ ಎಣ್ಣೆಯೊಂದಿಗೆ ಅಡುಗೆ ಸೋಡಾ, ಒಣ ಕಾರ, ಸಣ್ಣಗೆ ಕತ್ತರಿಸಿದ ಈರುಳ್ಳಿ, ಸ್ವಲ್ಪ ನೀರು ಸೇರಿಸಿ ಬಜಿ ಹಿಟ್ಟು ತಯಾರಿಸಿ.  ಕಾದ ಎಣ್ಣೆಯಲ್ಲಿ ಬಜಿ ಹಿಟ್ಟು ಹಾಕಿ ಕರೆದು ತೆಗೆಯಿರಿ.

ಹಸಿರು ಚಟ್ನಿ ಮಾಡುವ ಬಗೆ

4 ಹಸಿಮೆಣಸಿನ ಕಾಯಿ,  5-6 ಕಡ್ಡಿ ಕೊತ್ತಂಬರಿ ಸೊಪ್ಪು, 10 ಎಲೆ ಪುದೀನಾ, ರುಚಿಗೆ ತಕ್ಕಶ್ಟು ಉಪ್ಪು, ಕಾಲು ಲೋಟ ನೀರು – ಇವೆಲ್ಲವನ್ನೂ ಮಿಕ್ಸಿಯಲ್ಲಿ ಹಾಕಿ ರುಬ್ಬಿ , ಕೊನೆಗೆ 1/2 ಹೋಳು ನಿಂಬೆಹಣ್ಣ ರಸ ಸೇರಿಸಿದರೆ ಹಸಿರು ಚಟ್ನಿ ತಯಾರು.
ಸಂಜೆ ಹೊತ್ತಲ್ಲಿ ಹಸಿರು ಚಟ್ನಿಯೊಂದಿಗೆ ಕಾಂದಾ ಬಜಿ ತಿನ್ನಲು ಸೊಗಸಾಗಿರುತ್ತದೆ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks