ಕವಿತೆ: ಅಳದಿರು ಮನವೆ ತುಸು ಸೋಲಿಗಾಗಿ

ಬಸವರಾಜ್.ಟಿ.ಲಕ್ಶ್ಮಣ.

ಅಳದಿರು ಮನವೆ ತುಸು ಸೋಲಿಗಾಗಿ
ತುಸು ಹೋರಾಡು ಮನವೆ ಮುಂಬರುವ ಗೆಲುವಿಗಾಗಿ

ಸಾವಿರ ಸಾವಿರ ಉತ್ತುಂಗದ ಕನಸ ಮೂಡಿಸಿರುವ ನೀನು
ಕೇವಲ ಸಣ್ಣ ಸಣ್ಣ ಮಾತಿಗೆ ಅಂಜಿದೆಯಾ ನೀನು
ನಿನ್ನ ಗೆಲುವಿನ ನಾಗಲೋಟವನ್ನು
ನೋಡಲು ಕಾಯುತ್ತಿರುವರು ನಿನ್ನವರು ನಿನಗಾಗಿ
ಯಾಕೆ ಸುಮ್ಮನೆ ಪ್ರಯತ್ನಿಸದೆ
ಸೋಲೊಪ್ಪಿಕೊಳ್ಳುವೆ ಸಣ್ಣ ಪುಟ್ಟ ಕಶ್ಟಗಳಿಗಾಗಿ

ಅಳದಿರು ಮನವೆ ತುಸು ಸೋಲಿಗಾಗಿ
ತುಸು ಹೋರಾಡು ಮನವೆ ಮುಂಬರುವ ಗೆಲುವಿಗಾಗಿ

ನಿನ್ನಲ್ಲಿ ಏನೋ ಕೊರತೆ ಎಂದೇಕೆ ಅಳುತ್ತಿರುವೆ
ನಿನ್ನ ಗೆಲುವಿನ ಅಸ್ತ್ರವು ನಿನ್ನ ನಗುವೆ
ನಿನ್ನ ನೋಡಿ ಹೀಯಾಳಿಸಿದವರಿಗೆ
ತೋರಿಸು ನಿನ್ನ ಗೆಲುವಿನ ಸಾಮರ್‍ತ್ಯವನ್ನು
ಸುಮ್ಮನೆ ಯಾಕೆ ನಿರುತ್ಸಾಹಗೊಳಿಸುತ್ತಿರುವೆ
ಏನೂ ತಿಳಿಯದ ಈ ದೇಹವನ್ನು

ಅಳದಿರು ಮನವೆ ತುಸು ಸೋಲಿಗಾಗಿ
ತುಸು ಹೋರಾಡು ಮನವೆ ಮುಂಬರುವ ಗೆಲುವಿಗಾಗಿ

( ಚಿತ್ರಸೆಲೆ: theascent )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *