ಕವಿತೆ: ಯಾರಿವಳು?

– ಬಸವರಾಜ್.ಟಿ.ಲಕ್ಶ್ಮಣ.

ಯಾರಿವಳು, ಕೇಳ್ವಿ, ಪ್ರಶ್ನೆ, Who, question

ಮೌನವು ಮಾತನಾಡುತ್ತಿದೆ ಅವಳ ನಗುವಿಗಾಗಿ
ಮನವು ತುಡಿಯುತ್ತಿದೆ ಅವಳ ಪ್ರೀತಿಗಾಗಿ

ಅವಳ ಕುಡಿನೋಟದಿ ಪ್ರೀತಿ ಎಂಬ
ಮದುಪಾನವನ್ನ ಮನಸ್ಸಿಗೆ ಉಣಿಸಿದಳು

ಪ್ರೀತಿಯ ಅಮಲಿನಲ್ಲಿರುವ ಮನವಿಂದು
ಅವಳ ಪ್ರೀತಿಯ ಗುಂಗಿನಲ್ಲಿ ತಿರುಗುವಂತೆ ನಶೆಯೇರಿಸಿದಳು

ಪ್ರೀತಿಯ ಹಸಿವಿನಲ್ಲಿದ್ದ ಮನಕ್ಕೆ
ಇಂದು ಪ್ರೀತಿಯ ಹಸಿವ ನೀಗಿಸಲು ಬಂದಳವಳು

ಹಗೆತನದ ಕತ್ತಲಿನೊಳಗಿದ್ದ ಮನಕ್ಕಿಂದು ಹಣತೆ ಹಚ್ಚಿ
ಬೆಳಕೆಂಬ ಪ್ರೀತಿಯನ್ನು ಪಸರಿಸಿದಳವಳು

ಚಿಕ್ಕ ಪುಟ್ಟ ಕನಸಿನಿಂದ ಕೂಡಿದ ಮನಕ್ಕಿಂದು
ದೊಡ್ಡ ದೊಡ್ಡ ಕನಸುಗಳೆಂಬ ಬೀಜ ಬಿತ್ತಿದಳು

ಮನವನು ಇಶ್ಟೊಂದು ಮದುರವಾಗಿ
ಗಾಯಗೊಳಿಸಿದವಳು ಯಾರಿವಳು?

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. ಮಾರಿಸನ್ ಮನೋಹರ್ says:

    “ಮೌನವು ಮಾತಾಡುತ್ತಿದೆ” ಸಾಲು ತುಂಬಾ ಚೆನ್ನಾಗಿದೆ

  2. Mahesh says:

    Super. Please write more

ಅನಿಸಿಕೆ ಬರೆಯಿರಿ: