ಕವಿತೆ: ನವಿಲೆ ನವಿಲೆ
– ವೆಂಕಟೇಶ ಚಾಗಿ.
ನವಿಲೆ ನವಿಲೆ
ಸುಂದರ ನವಿಲೆ
ಬರುವೆಯಾ ನನ್ನ
ಶಾಲೆಯ ಕಡೆಗೆ
ಇಬ್ಬರೂ ಆಡೋಣ
ಜೊತೆಯಲಿ ಇಬ್ಬರು ಕುಣಿಯೋಣ
ಶಾಲೆಯ ತೋಟದ
ಹೂಗಳ ನೋಡು
ಚಂದದ ಅಂದದ
ಗಿಡಗಳ ನೋಡು
ಹಾಡುತ ಕುಣಿಯುತ
ಇಬ್ಬರೂ ಹಾಡೋಣ
ಜೊತೆಯಲಿ ಇಬ್ಬರೂ ಕುಣಿಯೋಣ
ತಿನ್ನಲು ಹಣ್ಣನು
ಕೊಡುವೆನು ನಿನಗೆ
ಸುಂದರ ಗರಿಯಾ
ಕೊಡುವೆಯಾ ನನಗೆ
ಮನೆಯನು ಕಟ್ಟಿ
ಆಟವ ಆಡೋಣ
ಗೊಂಬೆಯ ಮದುವೆ ಮಾಡೋಣ
ಗುಬ್ಬಿ ಗಿಳಿಗಳು
ಕರೆದಿವೆ ಬಳಿಗೆ
ಅಳಿಲು ಮೊಲಗಳು
ಚಂಗನೆ ಜಿಗಿದಿವೆ
ತಂಪಿನ ಮರದಡಿ
ಎಲ್ಲರೂ ಸೇರೋಣ
ಜೊತೆಯಲಿ ಎಲ್ಲರೂ ನಲಿಯೋಣ
(ಚಿತ್ರ ಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು