ಕವಿತೆ: ಕನ್ನಡದ ಹಣತೆ

– ಮಹೇಶ ಸಿ. ಸಿ.

ಬೆಳಗೋಣ ಬನ್ನಿ ಕನ್ನಡದ ಹಣತೆ
ಮನೆ ಮನಗಳಲ್ಲೂ ಚಿರಸ್ತಾಯಿ ಸಮತೆ
ಅ ಆ ಇ ಈ ಅಕ್ಶರ ಮಾಲೆಯ ಹಾರವು
ಕನ್ನಡ ತಾಯಿಗೆ ಸಮರ‍್ಪಣೆಯ ಬಾವವು

ಕವಿ ರನ್ನ ಪಂಪರ ಸಾರವು ತಿಳಿಸುವುದು
ಕನ್ನಡವೇ ನಮ್ಮುಸಿರು ನಾವೆಲ್ಲ ಒಂದೇ
ಕನ್ನಡವ ಉಳಿಸಲು ಕನ್ನಡವ ಬೆಳೆಸಲು
ಕನ್ನಡಿಗರು ಒಂದು ಹೆಜ್ಜೆಯೂ ಮುಂದೆ

ಕನ್ನಡಿಗರ ಸ್ವಾಬಿಮಾನವು ಕೆರಳಿದರೆ
ನೆತ್ತರನೆ ಹರಿಸಲು ಸದಾ ಸಿದ್ದವಂತೆ
ಕನ್ನಡ ತಾಯಿಗೆ ತಲೆಬಾಗೋ ಅನ್ಯರನು
ಹೆಮ್ಮೆಯಲಿ ಬೀಗುತ ಕೈ ಹಿಡಿವರಂತೆ

ಕನ್ನಡಮ್ಮನೆ ಸ್ಪೂರ‍್ತಿಯೂ, ಅವರೆ ಮೇಲೂ
ಕನ್ನಡವೆ ನಮ್ಮುಸಿರು ಕಿವಿಗೊಟ್ಟು ಕೇಳು
ಹತ್ತಾರು ಬಾಶೆ ಇದ್ದರೂ ನಮ್ಮ ದೇಶದಲಿ
ಕನ್ನಡಿಗ ನಾನೆಂದು ಹೆಮ್ಮೆಯಲಿ ಹೇಳು

ನಾಡಿನ ಒಳಗೂ ನಾಡಿನ ಹೊರಗೂ
ಮುಗಿಲೆತ್ತರ ಹಾರಿಸುವ ಬಾವುಟವ ಬನ್ನಿ
ಕನ್ನಡಿಗರ ಶೌರ‍್ಯವ ತೋರಿಸಲು ಜಗಕೆ
ಒಗ್ಗಟ್ಟಿನ ಮಂತ್ರ ಜಪಿಸುತ ಬನ್ನಿ.

(ಚಿತ್ರ ಸೆಲೆ: wikimedia.org )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks