ಕವಿತೆ: ಅನ್ನದಾತನ ಅಳಲು

ಅಮರೇಶ ಎಂ ಕಂಬಳಿಹಾಳ.

ರೈತ, Farmer

ತುಂಬುತ್ತಿಲ್ಲ ತುಂಗೆ
ಸುಬದ್ರವಾಗುತ್ತಿಲ್ಲ ಬದ್ರೆ
ಅದೇ ಕರಿ ನೆರಳು
ಬಿರು ಬಿಸಿಲು
ಚಿದ್ರ ಚಿದ್ರವಾಗುತ್ತಿದೆ
ರೈತನ ಹ್ರುದಯ

ತಳದ ಹೂಳು
ಕಣ್ಣು ಕುಕ್ಕುತ್ತಿದೆ
ಜಲವಿಲ್ಲದ ಜಲಾಶಯ
ನಾಚಿಕೆಯಾಗಬಹುದು ನಾಯಕರಿಗೆ
ಮಳೆ ನೀಡಿ
ಮಾನ ಕಾಪಾಡು ಮಳೆರಾಯ

ಎರಡು ಬೆಳೆ
ಕನಸಿನ ಮಾತು
ಕುಡಿಯಲು ನೀರು
ಸಿಕ್ಕರೆ ಸಾಕು
ಸಾಯುವಾಗ ಬಿಕ್ಕಳಿಕೆಗೆ
ಬಾರದಿರಲಿ ಬರ

ಕಣ್ಣೀರಲಿ ಕೈ ತೊಳೆಯುತಲಿರುವ
ಹಸಿವು ನೀಗಿಸುವ
ಅನ್ನದಾತ ಹಾಹಾಕಾರದಲ್ಲಿ
ನೊಂದುಕೊಂಡು ಹೊಂದಿಕೊಂಡಿಹನು
ಚಿಂದಿಯಾಗಿದೆ ಜೀವ
ಅಸಹಾಯಕತೆಯ ಬಾವ

ಕಣ್ಣೊರಸಿಕೊಂಡು ಸುಮ್ಮನಾಗಿವೆ
ತುಂಗಬದ್ರೆಯ ಗೇಟುಗಳು
ಕಣ್ಣೀರು ಹಾಕುವ ರೈತರೊಂದಿಗೆ
ಹೂಳು ತೆಗೆಸಿ
ಜೀವ ಉಳಿಸಿ
ರೈತರ ಕಡೆ ಗಮನ ಹರಿಸಿ

( ಚಿತ್ರ ಸೆಲೆ : newsgram.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: