ಎಳ್ಳಿನ ಉಂಡೆ

– ಸವಿತಾ.

eLLina unDe, ಎಳ್ಳು, ಎಳ್ಳಿನ ಉಂಡೆ, sesame

ಬೇಕಾಗುವ ಸಾಮಾನುಗಳು

  • ಎಳ್ಳು – 2 ಲೋಟ
  • ಒಣ ಕೊಬ್ಬರಿ ತುರಿ – 1/2 ಲೋಟ
  • ಹುರಿಗಡಲೆ ಹಿಟ್ಟು – 3 ಚಮಚ
  • ಬೆಲ್ಲದ ಪುಡಿ – 1 ಲೋಟ
  • ಏಲಕ್ಕಿ – 2
  • ತುಪ್ಪ – 2 ಚಮಚ

ಮಾಡುವ ಬಗೆ

ತುಪ್ಪದಲ್ಲಿ ಎಳ್ಳು ಹುರಿದು ತೆಗೆದಿಡಿ. ಅದೇ ಬಾಣಲೆಗೆ ಬೆಲ್ಲದ ಪುಡಿ, ಮೂರು ಚಮಚ ನೀರು ಸೇರಿಸಿ ಎಳೆ ಬರುವಂತೆ ಪಾಕ ಮಾಡಿ ಸೋಸಿಟ್ಟುಕೊಳ್ಳಿ. ಇದಕ್ಕೆ ಎಳ್ಳು, ಒಣ ಕೊಬ್ಬರಿ ತುರಿ ಹುರಿಗಡಲೆ(ಪುಟಾಣಿ) ಹಿಟ್ಟು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ. ಏಲಕ್ಕಿ ಪುಡಿ ಮಾಡಿ ಸೇರಿಸಿ ಕೈಯಾಡಿಸಿ.

ಕೈಗೆ ಸ್ವಲ್ಪ ನೀರು ಹಚ್ಚಿಕೊಂಡು ಒಂದೊಂದೇ ಉಂಡೆ ಕಟ್ಟಿ ಇಟ್ಟುಕೊಳ್ಳಿ. ಈಗ ಎಳ್ಳಿನ ಉಂಡೆ ಸವಿಯಲು ಸಿದ್ದ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: