ಕವಿತೆ : ಗುರು ನುಡಿ

ವೆಂಕಟೇಶ ಚಾಗಿ.

ಗುರು-ಶಿಶ್ಯ, Teacher-Student

ಮುದ್ದು ಮಗುವೇ ಆಲಿಸು ಎನ್ನುಡಿಯ
ನಿನ್ನಬ್ಯುದಯ ಎನ್ನ ಗುರಿ ನೀ ತಿಳಿಯ
ನೀ ಎನ್ನ ಬಂದು ನಿನ್ನೊಳಿತೆ ಎಂದೆಂದೂ
ನೀನಾಗು ಈ ಜಗಕೆ ಪ್ರೇಮಸಿಂದು

ಹಿರಿಯ ಮನಗಳ ಆಶಯವ ಪಾಲಿಸು
ಅವರ ಕನಸುಗಳ ನನಸಾಗಿಸು
ನೀನೆಂಬುದು ನಕ್ಷತ್ರ ನೀನಾಗು ಜಗಮಿತ್ರ
ಬದುಕ ರಂಗದೊಳಗೊಂದು ನೀ ಸೂತ್ರ

ಶ್ರಮದುಡಿಗೆ ನೀ ದರಿಸಿ ಬೆವರರಿಸು ಜಗಕೆ
ಸೋಲಿರಲಿ ಗೆಲುವಿರಲಿ ಮುನ್ನಡೆ ಸಾದನೆಗೆ
ಕಶ್ಟಗಳು ಇಶ್ಟಗಳು ಸುಕಗಳೇ ಸುಳಿಯಲಿ
ಜಗ್ಗದಿರು ಕುಗ್ಗದಿರು ಹಿಗ್ಗದಿರು ಬದುಕಿನಲಿ

ನ್ಯಾಯ ಮಾರ‍್ಗದಿ ನಡೆದು ನುಡಿದು
ಜಗದೊಳಿತಿಗೆ ನೀ ಕಲ್ಪವ್ರುಕ್ಶವಾಗು
ಬೆಳಕಾಗು ಉಸಿರಾಗು ನೀ ಬದುಕಾಗು
ಜನರಿಗೆ ಜಗಕೆ ನೀ ಸೂರ‍್ಯನಾಗು

( ಚಿತ್ರಸೆಲೆ : wikipedia )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: