ಹಬ್ಬದ ಸಿಹಿ: ಬಾದುಶಾ (ಬಾಲೂಶಾ)

– ಸವಿತಾ.

ಸಿಹಿ ತಿಂಡಿ ಒಂದೇ ಆದರೂ ಬಾದುಶಾ / ಬಾಲೂಶಾ / ಬಾಲೂಶಾಹಿ ಹೀಗೆ ಬೇರೆ ಬೇರೆ ಹೆಸರಿನಿಂದ ಕರೆಯಲಾಗುತ್ತದೆ. ಉತ್ತರ ಕರ‍್ನಾಟಕದಲ್ಲಿ ಇದನ್ನು ಹೆಚ್ಚಾಗಿ ನವರಾತ್ರಿ ಹೊತ್ತಿನಲ್ಲಿ ಮಾಡುತ್ತಾರೆ.

ಬೇಕಾಗುವ ಸಾಮಾನುಗಳು

 • ಮೈದಾ ಹಿಟ್ಟು – 1 ಲೋಟ
 • ಮೊಸರು – 1/2 ಲೋಟ
 • ಅಡುಗೆ ಸೋಡಾ – 1/4 ಚಮಚ
 • ತುಪ್ಪ – 2 ಚಮಚ
 • ಸಕ್ಕರೆ – 1 ಲೋಟ
 • ನೀರು – 1 ಲೋಟ
 • ಏಲಕ್ಕಿ – 1 ಲೋಟ
 • ಗುಲಾಬಿ ಎಸ್ಸೆನ್ಸ್ (ಬೇಕಾದರೆ) – 2 ಹನಿ
 • ಬಾದಾಮಿ – 2
 • ಗೋಡಂಬಿ – 2
 • ಪಿಸ್ತಾ – 2

ಮಾಡುವ ಬಗೆ

ಮೈದಾ ಸಾಣಿಗೆ ಹಿಡಿದು ಇಟ್ಟುಕೊಳ್ಳಿ. ಮೊಸರು, ತುಪ್ಪ, ಅಡುಗೆ ಸೋಡಾ ಬೆರೆಸಿ ಸ್ವಲ್ಪ ನೀರು ಸೇರಿಸಿ ಹಿಟ್ಟನ್ನು ನಾದಿ ಒಂದು ಗಂಟೆ ಕಾಲ ಇಡಬೇಕು.

ಸಕ್ಕರೆ ನೀರು ಸೇರಿಸಿ ಕುದಿಸಿ ಎರಡೆಳೆ ಪಾಕ ಮಾಡಿ ಇಟ್ಟುಕೊಳ್ಳಿ. ಏಲಕ್ಕಿ ಪುಡಿ ಮಾಡಿ ಸೇರಿಸಿ. ಬೇಕಾದರೆ ಸ್ವಲ್ಪ ಗುಲಾಬಿ ಎಸ್ಸೆನ್ಸ್ ಸೇರಿಸಿ ತೆಗೆದಿಡಿ.

ಕಲಸಿದ ಹಿಟ್ಟನ್ನು ಇನ್ನೊಮ್ಮೆ ನಾದಿಕೊಂಡು, ಸಣ್ಣ ಅಳತೆ ಹಿಟ್ಟು ಹಿಡಿದು ಉದ್ದಿನ ವಡೆ ತರಹ ಮಾಡಿ ಕಾದ ಎಣ್ಣೆಯಲ್ಲಿ ಕರಿಯಿರಿ. ಕರಿದು ಅರ‍್ದ ಗಂಟೆ ಬಿಟ್ಟು ಸಕ್ಕರೆ ಪಾಕದಲ್ಲಿ ಅದ್ದಿ , ಅರ‍್ದ ಗಂಟೆ ಬಿಡಿ. ಆಮೇಲೆ ಸಕ್ಕರೆ ಪಾಕದಿಂದ ತೆಗೆದು ಇಟ್ಟುಕೊಳ್ಳಿ.

ಅಲಂಕಾರಕ್ಕೆ ಬಾದಾಮಿ, ಗೋಡಂಬಿ, ಪಿಸ್ತಾ ಸಣ್ಣಗೆ ಕತ್ತರಿಸಿ ಹಾಕಿ ಸ್ವಲ್ಪ ಆರಿದ ಬಳಿಕ ಸವಿಯಲು ನೀಡಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: