ಕವಿತೆ: ಆಡದೇ ಉಳಿದ ಮಾತು
– ಅಮುಬಾವಜೀವಿ.
ಆಡದೇ ಉಳಿದ
ನೂರು ಮಾತುಗಳ
ಈ ನಿನ್ನ ನೋಟ ಹೇಳಿತು
ಎದೆಯ ಬಾವ
ಮಿಡಿದ ಗಾನ
ಮನವು ಮೌನದಿ ಕೇಳಿತು
ಬಾಗಿಲ ಹಿಂದೆ
ಇಣುಕಿಣುಕಿ ನೋಡುವ
ಕಾತರ ಎಶ್ಟೊಂದು ಹಿತವಾಗಿತ್ತು
ದೂರದೂರಕ್ಕೆ ನೀ ಹೋಗುವಾಗ
ಮರೆಯಾಗುವ ಮುನ್ನ ಹಿಂತಿರುಗಿದಾಗ
ಮನವು ಹುಚ್ಚೆದ್ದು ಕುಣಿದಿತ್ತು
ನೋಡಲು ಬಂದವನು
ನೀನಂದು ಒಪ್ಪಿಕೊಂಡೆ
ನಾನಿನ್ನ ಸಂಗಾತಿಯೆಂದು
ಕ್ಶಣಕ್ಶಣವೂ ತಲ್ಲಣಿಸಿ
ತಳಮಳದ ಮನವ ತಣಿಸಿ
ತಬ್ಬಿಕೊಂಡಾಗ ವಶವಾದೆ ನಾನಂದು
ತಾಳಿ ಬಂದ ಬೆಸೆದು
ನಿನ್ನ ಬಾಳೊಳಗೆ ನನ್ನ ಕರೆದು
ಮುತ್ತೈದೆ ಪಟ್ಟ ಕೊಟ್ಟೆ
ಉಸಿರು ಇರುವತನಕ
ನಿನ್ನ ಸೇವೆಯೇ ನನ್ನ ಕಾಯಕ
ನಿನಗಾಗಿ ನನ್ನನ್ನೇ ಕೊಟ್ಟುಬಿಟ್ಟೆ
(ಚಿತ್ರ ಸೆಲೆ: reddit.com)
ಇತ್ತೀಚಿನ ಅನಿಸಿಕೆಗಳು