ಕವಿತೆ : ಎತ್ತರಕೆ ಏರಿದಾಗ

ನವೀನ್ ಜಿ. ಬೇವಿನಾಳ್.

ಸಾದನೆ. ಎತ್ತರ, height, achievement

ಆಕಾಶದಲ್ಲಿ ಹಾರುವ ಹಕ್ಕಿಗೆ
ಬೂಮಿಯು ಚಿಕ್ಕದಂತಾಗಿತ್ತು
ಬೂಮಿಗೆ ಇಳಿದ ಹಕ್ಕಿಗೆ
ಎಲ್ಲಿರುವೆ ನಾನೀಗ ಎಂದಂತಾಗಿತ್ತು

ಏರು ಎತ್ತರವ ಬಾನೆತ್ತರವ
ಏರಿದ ಮೇಲೆ ಒಮ್ಮೆಯಾದರೂ
ಕೆಳಗೆ ಬಂದೆ ಬರುವೆ
ಹುಡುಕುವೆ ನಿನ್ನ ಆವಾಸಸ್ತಾನವ

ಮೋಹಕ ಮಲೆಯಲ್ಲಿ
ಕಾಂಚನದ ಸೆಲೆಯಲ್ಲಿ
ಎಲ್ಲವೂ ನಶ್ವರ ಎಲ್ಲರೂ ದೂರ ಪರಿಚಿತ
ಚಿರ ಪರಿಚಿತನಾಗು ಎತ್ತರ ಏರಿದಾಗಲು

ಸ್ಪರ‍್ದಾತ್ಮಕ ಜಗತ್ತು ಇದು
ನಿನ್ನ ಹಿಂದಟ್ಟಲು
ಸಾವಿರ ಸೈನ್ಯವುಂಟು
ತಿರುಗಿ ನೋಡುವಶ್ಟರಲ್ಲಿ
ಮುಂದಿರುವರು ನಿನಗಿಂತಲು

ಬದುಕು ಸಾಗಿಸು ತಾರ‍್ಕಿಕವಾಗಿ
ಅಕ್ರಮದ ಅಸಲುಗಳ ದೂರಮಾಡಿ
ಬೆಳೆಯುತ್ತಿರುವ ಜಗತ್ತು ಇದು
ಬೆಳೆಯುತಿರು ನೀನು
ಕೆಳಗೆ ನೋಡುವುದ ಮರೆಯದೆ

(ಚಿತ್ರ ಸೆಲೆ: unsplash.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: