ಮಸಾಲಾ ವಡೆ

– ಸವಿತಾ.

masala vade, ಮಸಾಲಾ ವಡೆ

ಬೇಕಾಗುವ ಸಾಮಾನುಗಳು

  • ಉದ್ದಿನಬೇಳೆ – 1 ಲೋಟ
  • ಕಡಲೆಬೇಳೆ – 1 ಲೋಟ
  • ಹೆಸರುಬೇಳೆ – 1 ಲೋಟ
  • ಅಲಸಂದೆಬೇಳೆ – 1 ಲೋಟ
  • ಕರಿಬೇವು – 10 ಎಲೆ
  • ಕೊತ್ತಂಬರಿ ಸೊಪ್ಪು – 5-6 ಕಡ್ಡಿ
  • ಹಸಿ ಮೆಣಸಿನಕಾಯಿ – 5-6
  • ಬೆಳ್ಳುಳ್ಳಿ – 4 ಎಸಳು
  • ಹಸಿ ಶುಂಟಿ – 1/4 ಇಂಚು
  • ಜೀರಿಗೆ – 1/2 ಚಮಚ
  • ಅಜವಾನ್ (ಓಂ ಕಾಳು) – 1/2 ಚಮಚ
  • ದಾಲ್ಚಿನ್ನಿ – 1/4 ಇಂಚು
  • ಉಪ್ಪು – ರುಚಿಗೆ ತಕ್ಕಶ್ಟು
  • ಅರಿಶಿಣ – ಸ್ವಲ್ಪ
  • ಅಡುಗೆ ಸೋಡಾ – ಸ್ವಲ್ಪ

ಮಾಡುವ ಬಗೆ

ಎಲ್ಲ ಬೇಳೆ ತೊಳೆದು ನಾಲ್ಕು ಗಂಟೆ ಕಾಲ ನೆನೆಯಲು ಇಡಬೇಕು. ಹಸಿ ಶುಂಟಿ ಸಿಪ್ಪೆ ತೆಗೆದು, ಬೆಳ್ಳುಳ್ಳಿ ಎಸಳು ಬಿಡಿಸಿ, ಹಸಿ ಮೆಣಸಿನಕಾಯಿ, ಕರಿಬೇವು, ಕೊತ್ತಂಬರಿ ಸೊಪ್ಪು ಜೀರಿಗೆ, ಓಂ ಕಾಳು, ದಾಲ್ಚಿನ್ನಿ ಮತ್ತು ಸ್ವಲ್ಪ ಉಪ್ಪು ಸೇರಿಸಿ ಮಿಕ್ಸರ್ ನಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಅದೇ ಜಾರ್ ನಲ್ಲಿ ನೆನೆಸಿ ಇಟ್ಟ ಬೇಳೆ ತರಿ ತರಿಯಾಗಿ ರುಬ್ಬಿಕೊಳ್ಳಿ. ನೀರು ಜಾಸ್ತಿ ಹಾಕದೇ ರುಬ್ಬಿ. ಸ್ವಲ್ಪ ಅರಿಶಿಣ ಮತ್ತು ಸ್ವಲ್ಪ ಅಡುಗೆ ಸೋಡಾ ಹಾಕಿ ಚೆನ್ನಾಗಿ ಕಲಸಿ. ಕೈಗೆ ಸ್ವಲ್ಪ ನೀರು ಹಚ್ಚಿಕೊಂಡು ಉದ್ದಿನ ವಡೆ ತರಹ ಕೈಯಿಂದ ತಟ್ಟಿ ಕಾದ ಎಣ್ಣೆಯಲ್ಲಿ ಕರಿಯಿರಿ.

ಈಗ ಮಸಾಲಾ ವಡೆ ಸವಿಯಲು ಸಿದ್ದ. ಚಳಿಗಾಲದಲ್ಲಿ ಸಂಜೆ ಹೊತ್ತು ಬಿಸಿ ಬಿಸಿ ಮಸಾಲಾ ವಡೆ ತುಂಬಾ ರುಚಿ ಯಾಗಿರುತ್ತದೆ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: