ಮಾಡಿ ನೋಡಿ: ಬಿಸಿ ಬಿಸಿ ದಪಾಟಿ

– ಸವಿತಾ.

dapati, ದಪಾಟಿ

ಬೇಕಾಗುವ ಸಾಮಾನುಗಳು

  • ಕಡಲೆ ಹಿಟ್ಟು – 1 ಬಟ್ಟಲು
  • ಗೋದಿ ಹಿಟ್ಟು – 1 ಬಟ್ಟಲು
  • ಜೋಳದ ಹಿಟ್ಟು – 1 ಬಟ್ಟಲು
  • ಅಕ್ಕಿಹಿಟ್ಟು – 1/2 ಬಟ್ಟಲು (ಬೇಕಾದರೆ)
  • ಜೀರಿಗೆ – 1/2 ಚಮಚ
  • ಅಜವಾನ (ಓಂ ಕಾಳು) – 1/2 ಚಮಚ
  • ಹವೀಜ (ಕೊತ್ತಂಬರಿ ಕಾಳು) – 1/2 ಚಮಚ
  • ಉಪ್ಪು – 1/2 ಚಮಚ
  • ಹಸಿ ಮೆಣಸಿನಕಾಯಿ – 3-4
  • ಕರಿಬೇವು ಎಲೆ – 5-6
  • ಬೆಳ್ಳುಳ್ಳಿ ಎಸಳು – 5-6
  • ಎಣ್ಣೆ – 1/4 ಬಟ್ಟಲು
  • ಕತ್ತರಿಸಿದ ಕೊತ್ತಂಬರಿ – 1/2 ಬಟ್ಟಲು
  • ಕತ್ತರಿಸಿದ ಹಸಿ ಈರುಳ್ಳಿ – 1 ಬಟ್ಟಲು
  • ಅರಿಶಿಣ – ಸ್ವಲ್ಪ
  • ಒಣ ಕಾರದ ಪುಡಿ – ಸ್ವಲ್ಪ
  • ಕರಿ ಇಲ್ಲವೇ ಬಿಳಿ ಎಳ್ಳು – ಸ್ವಲ್ಪ

ಮಾಡುವ ಬಗೆ

ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ, ಜೀರಿಗೆ, ಅಜವಾನ ಮತ್ತು ಕೊತ್ತಂಬರಿ ಕಾಳನ್ನು ಜಜ್ಜಿ ಪುಡಿ ಮಾಡಿಟ್ಟುಕೊಳ್ಳಿ. ಕಡಲೆ ಹಿಟ್ಟು, ಗೋದಿ ಹಿಟ್ಟು ಮತ್ತು ಜೋಳದ ಹಿಟ್ಟು ಸಾಣಿಸಿ ಇಟ್ಟುಕೊಳ್ಳಿ. ಇದಕ್ಕೆ ಕತ್ತರಿಸಿದ ಹಸಿ ಈರುಳ್ಳಿ ಸೊಪ್ಪು, ಕತ್ತರಿಸಿದ ಕೊತ್ತಂಬರಿ ಸೊಪ್ಪು ಸೇರಿಸಿ ಸ್ವಲ್ಪ ಅರಿಶಿಣ ಪುಡಿ ಹಾಕಿ. ಮೊದಲೇ ಜಜ್ಜಿಟ್ಟುಕೊಂಡ ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿಯನ್ನು ಸೇರಿಸಿ. ಒಣ ಕಾರದ ಪುಡಿ ಬೇಕಾದರೆ ಸ್ವಲ್ಪ ಸೇರಿಸಬಹುದು. ರುಚಿಗೆ ತಕ್ಕಶ್ಟು ಉಪ್ಪು ಸೇರಿಸಿ. ಕರಿ ಇಲ್ಲವೇ ಬಿಳಿ ಎಳ್ಳು ಸೇರಿಸಿ ಸ್ವಲ್ಪ ಬಿಸಿ ನೀರು ಹಾಕಿ ಚೆನ್ನಾಗಿ ನಾದಿ ಇಟ್ಟುಕೊಳ್ಳಿ.

ನಾದಿಕೊಂಡ ಹಿಟ್ಟನ್ನು ಜೋಳದ ರೊಟ್ಟಿ ತರಹ ಕೈಯಿಂದ ತಟ್ಟಿ. ಮೇಲೆ ಸ್ವಲ್ಪ ಎಳ್ಳು ಹಚ್ಚಿ ಲಟ್ಟಿಸಿ. ರೊಟ್ಟಿ ತವೆಯ ಮೇಲೆ ಜೋಳದ ರೊಟ್ಟಿ ತರಹ ಒಂದು ಬದಿ ನೀರು ಹಚ್ಚಿ ಇನ್ನೊಂದು ಬದಿ ಎಣ್ಣೆ ಹಚ್ಚಿ ಬೇಯಿಸಿ, ಒಂದೊಂದೇ ಮಾಡಿ ತೆಗೆಯಿರಿ.

ಈಗ ದಪಾಟಿ ಮೊಸರು, ಶೇಂಗಾ ಚಟ್ನಿ ಜೊತೆ ಸವಿಯಲು ಸಿದ್ದ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: