ಕವಿತೆ: ಸೋಂಕಿಗೆ ಹೆದರಿ
ಮುಚ್ಚಿದ ಬಾಗಿಲು
ತೆರೆದು ಮುಚ್ಚಿದೆ
ಯಾಕೆ ಯಾರೂ ಬರುತಿಲ್ಲ
ಹಾಲು, ಪೇಪರು
ಬಂದೇ ಇಲ್ಲ
ಅಪ್ಪ ಆಪೀಸಿಗೆ ಹೋಗಿಲ್ಲ
ಶಾಲೆಯೂ ಇಲ್ಲ
ಆಡಲೂ ಇಲ್ಲ
ಇದು ರಜೆಯೋ ಇಲ್ಲಾ ಸಜೆಯೋ?
ಮರವೂ ಉಂಟು
ಕೋತಿಯೂ ಉಂಟು
ಮಕ್ಕಳಿಗೇಕೆ ಬರವೋ?
ಅಂಗಳದಕ್ಕಿ
ಚಿಂವ್ ಚಿಂವ್ ಕರೆದರೂ
ಕಾಳನು ಇಕ್ಕಲಾರೆ
ಕಳ್ಳನೆ ಬೆಕ್ಕು
ಕದ್ದು ಹೋದರೂ
ಅಟ್ಟಿಸಿ ಹೋಗಲಾರೆ
ಮಿಕ್ಕವರೆಲ್ಲ ಎಲ್ಲಿಹರಪ್ಪ?
ಹೊರಗೆ ಏಕೆ ಬರರು?
ಯಾವುದೋ ಸೋಂಕು
ಸೋಕದೆ ಇರಲು
ಸುಮ್ಮನೆ ಮನೆಯೊಳಗಿಹರು
ಆ ಕೆಟ್ಟನೆ ಸೋಂಕು
ಪಟ್ಟನೇ ಸಾಯಲಿ
ದೇವರೆ ಏನಾದರೂ ಮಾಡು!
ನೀ ಮೂರನೆ ಕಣ್ಣು
ಬಿಟ್ಟರೆ ಸಾಕು
ನಿನಗಿಲ್ಲವೋ ಯಾವುದು ಈಡು
(ಚಿತ್ರ ಸೆಲೆ: pikrepo.com)
?❤?ಕೊರೋನ ವೈರಸಸ್ ಸೋಂಕಿನ ಪದಗಳ ಜೋಡಣೆ ಹಂಸನೆಡೆ ಥರ ಇತ್ತು?❤