ಮನೆಯಲ್ಲೇ ಮಾಡಿ ಕೇಕ್

– ಸವಿತಾ.

cake, ಕೇಕ್

ಬೇಕಾಗುವ ಸಾಮಾನುಗಳು

 • ಬಾಂಬೆ ರವೆ – 1 ಲೋಟ
 • ಗೋದಿ ಹಿಟ್ಟು ಇಲ್ಲವೇ ಮೈದಾ – 1 ಲೋಟ
 • ಬೆಲ್ಲ ಅತವಾ ಸಕ್ಕರೆ – 3/4 ಲೋಟ
 • ಮೊಸರು – 1/2 ಲೋಟ
 • ಎಣ್ಣೆ – 1/2 ಲೋಟ
 • ಹಾಲು – 3/4 ಲೋಟ
 • ವೆನಿಲ್ಲಾ ಎಸೆನ್ಸ್ – 1 ಚಮಚ
 • ಬೇಕಿಂಗ್ ಪೌಡರ್ – 1 ಚಮಚ
 • ಅಡುಗೆ ಸೋಡಾ – 1/2 ಚಮಚ
 • ಉಪ್ಪು – 1/4 ಚಮಚ (ಬೇಕಾದರೆ)
 • ಕೊಕೊ ಪೌಡರ್ – 2 ಚಮಚ ( ಬೇಕಾದರೆ)
 • ಚಕ್ಕೆ – 1 ಇಂಚು

ಮಾಡುವ ಬಗೆ

ಬೆಲ್ಲ , ಕಾಲು ಲೋಟ ಹಾಲು , ಕೊಕೊ ಪೌಡರ್ ಒಂದು ಪಾತ್ರೆಗೆ ಸೇರಿಸಿ ಎರಡು ನಿಮಿಶ ಬಿಸಿ ಮಾಡಿ ಇಳಿಸಿ, ಆರಿಸಲು ಇಡಿ. ಚಮಚದಿಂದ ಕೈಯಾಡಿಸಿ ಬೆಲ್ಲ ಮತ್ತು ಕೊಕೊ ಪೌಡರ ಕರಗಿಸಿ . ಬೇಕಿಂಗ್ ಪೌಡರ್ ಮತ್ತು ಅಡುಗೆ ಸೋಡಾ ಹಾಕಿ ವೆನಿಲ್ಲಾ ಎಸೆನ್ಸ್ ಸೇರಿಸಿ. ಸ್ವಲ್ಪ ಉಪ್ಪು, ಚಕ್ಕೆ ಪುಡಿ ಮಾಡಿ ಹಾಕಿ ನಂತರ ರವೆ ಮತ್ತು ಗೋದಿ ಹಿಟ್ಟು ಸಾಣಿಗೆ ಹಿಡಿದು, ಸೇರಿಸಿ ಕಲಸಿ. ನಂತರ ಮೊಸರು, ಎಣ್ಣೆ ಮತ್ತು ಅರ‍್ದ ಲೋಟ ಹಾಲು ಸೇರಿಸಿ ಚೆನ್ನಾಗಿ ಕಲಸಿ. ಕಲಸಿದ ಬಳಿಕ 15 ನಿಮಿಶ ನೆನೆಯಲು ಇಡಬೇಕು.

ಕುಕ್ಕರ್ ಶಿಳ್ಳೆ ತೆಗೆದು, ರಬ್ಬರ್ ರಿಂಗ್ ಹಾಗೆಯೇ ಇಟ್ಟು ಹತ್ತು ನಿಮಿಶ ದೊಡ್ಡ ಉರಿಯಲ್ಲಿ ಬಿಸಿ ಮಾಡಿ ನಂತರ ಸಣ್ಣ ಉರಿಯಲ್ಲಿ ಇಟ್ಟುಕೊಳ್ಳಿ. ತಳಕ್ಕೆ ಒಂದು ಬಟ್ಟಲು ಉಪ್ಪು ಹಾಕಿ . ಸ್ವಲ್ಪ ಎತ್ತರ ಆಗುವ ಹಾಗೇ ಒಂದು ತಟ್ಟೆ ಇಟ್ಟುಕೊಳ್ಳಿ. ಒಂದು ದುಂಡನೆಯ ಅಗಲ ಪಾತ್ರೆಗೆ ಎಣ್ಣೆ ಸವರಿ ಕೇಕ್ ಮಿಶ್ರಣ ಸುರುವಿ ನಂತರ ಕುಕ್ಕರ್ ನಲ್ಲಿ ಇಟ್ಟು ಅದಕ್ಕೆ ಒಂದು ತಟ್ಟೆ ಮುಚ್ಚಿ. ನಂತರ ಕುಕ್ಕರ್ ಮುಚ್ಚಳ ಮುಚ್ಚಿ ಸಣ್ಣ ಉರಿ ಯಲ್ಲಿ ಇಟ್ಟು 50 ನಿಮಿಶ ಬೇಯಿಸಿ ಆಮೇಲೆ ಗ್ಯಾಸ್ ಸ್ಟೋವ್ ಆರಿಸಿ. ಹತ್ತು ನಿಮಿಶ ಬಿಟ್ಟು ತೆಗೆದು ಪಾತ್ರೆ ತಿರುಗಿಸಿ ಹಾಕಿ. ಕೇಕ್ ಕತ್ತರಿಸಿ ಸವಿಯಿರಿ.

ಗೋದಿ ಹಿಟ್ಟು ಬೆಲ್ಲ ಬಳಸಿ ಮಾಡುವ ಕೇಕ್ ನಿಂದ ಆರೋಗ್ಯಕ್ಕೆ ಯಾವುದೇ ಹಾನಿಯಿಲ್ಲ.

ನಿಮಗೆ ಹಿಡಿಸಬಹುದಾದ ಬರಹಗಳು

1 Response

 1. Basavaraj GB says:

  Excellent advisory and explaination in detail

ಅನಿಸಿಕೆ ಬರೆಯಿರಿ: