ಸಿಹಿ ಪ್ರಿಯರಿಗೆ : ಗಜ್ಜರಿ ಹಲ್ವಾ

ನಿತಿನ್ ಗೌಡ.

ಗಜ್ಜರಿ ಹಲ್ವಾ, carrot halva

ಏನೇನು ಬೇಕು?

  • ಗಜ್ಜರಿ 1/2 ಕೆ.ಜಿ
  • ಸಕ್ಕರೆ  250-300 ಗ್ರಾಮ್
  • ತುಪ್ಪ  100-150 ಗ್ರಾಮ್
  • ಗೋಡಂಬಿ 30 ಗ್ರಾಮ್
  • ದ್ರಾಕ್ಶಿ 20 ಗ್ರಾಮ್
  • ಹಾಲು 100 ಮಿ.ಲಿ
  • ನೀರು 50 ಮಿ.ಲಿ
  • ಹಾಲಿನ ಪುಡಿ 50 ಗ್ರಾಮ್

ಮಾಡುವ ಬಗೆ

ಗಜ್ಜರಿಯನ್ನು ನೀರಿನಲ್ಲಿ ತೊಳೆದು ತುರಿದುಕೊಳ್ಳಿ. ಒಂದು ಪಾತ್ರೆಯಲ್ಲಿ ಸ್ವಲ್ಪ ತುಪ್ಪ ಹಾಕಿ 1/2 ನಿಮಿಶ ಕಾಯಿಸಿ, ಅದಕ್ಕೆ ಗೋಡಂಬಿ ಮತ್ತು ದ್ರಾಕ್ಶಿ ಹಾಕಿ ಚೂರು ಹುರಿದುಕೊಳ್ಳಿ. ಆಮೇಲೆ ತುರಿದ ಗಜ್ಜರಿಯನ್ನು ಪಾತ್ರೆಗೆ ಹಾಕಿ ತುಪ್ಪದಲ್ಲಿ 1 ನಿಮಿಶ ಹುರಿಯಿರಿ. ಆಮೇಲೆ ಗಜ್ಜರಿಯನ್ನು ತೆಗೆದು ಕುಕ್ಕರಿಗೆ ಹಾಕಿಕೊಂಡು ಅದಕ್ಕೆ 100 ಮಿಲಿ ಹಾಲು, 50 ಮಿಲಿ ನೀರು ಹಾಕಿ 2 ಸೀಟಿ ಹೊಡಿಸಿ ಬೇಯಿಸಿ. ಬಳಿಕ ಗಜ್ಜರಿಯನ್ನು ಪಾತ್ರೆಗೆ ಹಾಕಿ, ಅದಕ್ಕೆ ಸಕ್ಕರೆಯನ್ನು ಚೂರು ಚೂರು ಹಾಕುತ್ತಾ ಅಲುಗಾಡಿಸಿ. ಈಗ ಗಜ್ಜರಿ ನೀರ್ ಒಡೆದು ಇಂಗುವವರೆಗೂ ಬೇಯಿಸಿ. ಇಂಗಿದ ಮೇಲೆ ಹಾಲಿನ ಪುಡಿಯನ್ನು ಹಾಕಿ ಅಲುಗಾಡಿಸಿ. ಆಮೇಲೆ ಚೂರು ಚೂರು ತುಪ್ಪ ಹಾಕುತ್ತಾ ಹೋಗಿ. ನಂತರ 2 ನಿಮಿಶ ಬೇಯಿಸಿ ಒಲೆ ನಂದಿಸಿ.

ಗಮನಿಸಿ :

  • ಸಕ್ಕರೆಯ ಅಳತೆ ನಿಮ್ಮ ರುಚಿಗೆ ತಕ್ಕಂತೆ ಹೆಚ್ಚು ಕಡಿಮೆ ಮಾಡಬಹುದು.
  • ತುಪ್ಪ ಹಾಕಿದಂತೆ ರುಚಿ ಚೆನ್ನಾಗಿ ಬರತ್ತೆ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: