ಕವಿತೆ : ವಿದಿಯೇ…
– ವಿನು ರವಿ.
ವಿದಿಯೇ ನಿನ್ನ ಲೀಲೆಯ
ಏನೆಂದು ಹೇಳಲಿ
ಎಲ್ಲರ ಹಣೆಯ ಮೇಲೆ
ನಿನ್ನಿಶ್ಟದಂತೆ ಬರೆದೆ
ಬದುಕಿನ ಓಟಕೆ
ನಿನಗಿಶ್ಟ ಬಂದಂತೆ
ತಡೆ ಹಾಕುವೆ
ನೀನಾಡುವ ಆಟಕೆ
ಎಲ್ಲರ ಮಣಿಸುವೆ
ಮೂರು ದಿನದ ಬಾಳಿಗೆ
ನೂರು ನೋವುಗಳ ಕಟ್ಟಿರುವೆ
‘ಚಿರಂಜೀವಿ’ಯಾಗು ಎಂದ
ಮಾತ್ರಕ್ಕೆ ಚಿರಂಜೀವಿಯಾಗುವರೆ
ಎಶ್ಟು ತಿಳಿದರೇನು
ನಿನ್ನ ಗೆಲ್ಲಬಲ್ಲರೇ
ನೀನು ನಡೆಸಿದಂತೆ
ಎಲ್ಲರೂ ನಡೆಯುವವರೆ
ಹೇಳಲಿಲ್ಲ ಯಾರಿಗೂ ನಿನ್ನ
ಹೆಜ್ಜೆ ಗುರುತನು
ನೀನು ನಡೆಸಿದಂತೆ ನಡೆಯಲು
ಮಾತ್ರ ಹೇಳುವೆ
ಈ ಸತ್ಯವ ಅರಿತವನು
ಏನೂ ಕೇಳನು ಏನು ಮಾತಾಡನು
ಬಾಳ ದೋಣಿ ನಡೆಸಿದಂತೆ
ಸುಮ್ಮನೆ ನಡೆದುಬಿಡುವನು
( ಚಿತ್ರಸೆಲೆ : philosophyofbrains.com )
ಇತ್ತೀಚಿನ ಅನಿಸಿಕೆಗಳು