ಸೌತೆಕಾಯಿ ಗೊಜ್ಜು

– ಸವಿತಾ.

ಸೌತೆಕಾಯಿ ಗೊಜ್ಜು, cucumber gojju

ಬೇಕಾಗುವ ಸಾಮಾನುಗಳು

  • ಸೌತೆಕಾಯಿ – 2
  • ಹಸಿ ಕೊಬ್ಬರಿ ತುರಿ – 1 ಬಟ್ಟಲು
  • ಹಸಿ ಮೆಣಸಿನಕಾಯಿ – 2
  • ಜೀರಿಗೆ – 1/2 ಚಮಚ
  • ಸಾಸಿವೆ – 1/2 ಚಮಚ
  • ಕರಿಬೇವು – 7-8
  • ಇಂಗು – 1/4 ಚಮಚ
  • ಅರಿಶಿಣ ಪುಡಿ – 1 ಚಿಟಿಕೆ
  • ಕೊತ್ತಂಬರಿ ಸೊಪ್ಪು – ಸ್ವಲ್ಪ
  • ಎಣ್ಣೆ – 2 ಚಮಚ
  • ಉಪ್ಪು – ರುಚಿಗೆ ತಕ್ಕಶ್ಟು

ಮಾಡುವ ಬಗೆ

ಹಸಿ ಕೊಬ್ಬರಿ ತುರಿದು ಸ್ವಲ್ಪ ನೀರು ಮತ್ತು ಹಸಿ ಮೆಣಸಿನಕಾಯಿ, ಸ್ವಲ್ಪ ಉಪ್ಪು ಸೇರಿಸಿ ರುಬ್ಬಿ ಇಟ್ಟುಕೊಳ್ಳಿ. ಸೌತೆಕಾಯಿ ತೊಳೆದು ತುರಿದು ರುಬ್ಬಿದ ಮಿಶ್ರಣಕ್ಕೆ ಸೇರಿಸಿ ಇಡಿ. ಎಣ್ಣೆ ಬಿಸಿ ಮಾಡಿ ಒಗ್ಗರಣೆ ಮಾಡಿಕೊಳ್ಳಿ. ಸಾಸಿವೆ ಜೀರಿಗೆ ಕರಿಬೇವು ಸ್ವಲ್ಪ ಇಂಗು, ಅರಿಶಿಣ ಹಾಕಿ ಹುರಿದು ತೆಗೆದಿಡಿ. ಆರಿದ ನಂತರ ರುಬ್ಬಿದ ಮಿಶ್ರಣ ಮತ್ತು ಸೌತೆಕಾಯಿ ತುರಿ ಹಾಕಿ ಚೆನ್ನಾಗಿ ಕಲಸಿ. ಕತ್ತರಿಸಿದ ಕೊತ್ತಂಬರಿ ಸೊಪ್ಪು ಸ್ವಲ್ಪ ಮೇಲೆ ಹಾಕಿ ಅಲಂಕರಿಸಿ.

ಈಗ ಸೌತೆಕಾಯಿ ಗೊಜ್ಜು ಸವಿಯಲು ಸಿದ್ದ. ಚಪಾತಿ, ಅನ್ನದ ಜೊತೆ ಸವಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: