ಕವಿತೆ: ಅಪಾತ್ರ
ಅಪಾತ್ರ ಆರೋಪಗಳು
ನಿಂತ ನೀರಿಗೆ ಕಲ್ಲೆಸೆದಂತೆ
ಮುಳುಗಿದರೂ ಕಲ್ಲು
ಎದ್ದ ತರಂಗಗಳು ನಿಲ್ಲವು
ಸಹಿಸಬೇಕಿದೆ ಮೂದಲಿಕೆ
ತಲ್ಲಣಿಸಿದ ಮನಕೆ
ಕಾಲವೇ ಮೂಲಿಕೆ
ಅಪಾತ್ರ ನಂಬಿಕೆಗಳು
ನಿಂತ ನೆಲವೆ ಕಂಪಿಸಿದಂತೆ
ಒಡೆದ ಒಲವಿನ ಕನ್ನಡಿ
ಸರಿದ ಕಾಲ ಮರಳದು
ಕೊಡಲಿ ಪೆಟ್ಟಾದ ವಿಶ್ವಾಸಗಾತ
ಬರಡಾದ ಮನಕೆ
ಕಾಡುವ ಜೀರುಂಡೆ
ಅಪಾತ್ರ ದಾನ
ಅಯೋಗ್ಯನಿಗೊಲಿದ ಯೋಗದಂತೆ
ಹರಿದು ಹೋದ ನೀರು
ಕೊಟ್ಟದ್ದಕ್ಕಲ್ಲ ಸಂಕಟ
ಸೇರಿತಲ್ಲ ಸಲ್ಲದವನಿಗೆ
ಮಿತಿಯಿಲ್ಲದ ನಿರೀಕ್ಶೆ
ಅಪೇಕ್ಶೆಯೇ ಅಪಾತ್ರ
(ಚಿತ್ರ ಸೆಲೆ : pxhere.com )
ಇತ್ತೀಚಿನ ಅನಿಸಿಕೆಗಳು