ಕವಿತೆ : ಮೋಕ್ಶದಾಯಿನಿ ಶ್ರೀ ಪಾರ‍್ವತಿದೇವಿ

.

ಚಾಮುಂಡಿ, chamundi

ಸಿಂಹವಾಹನ ಏರಿ ಬರುವ ದುಶ್ಟರ ಸಂಹಾರಿ
ಬಾಗ್ಯದಾಯಿನಿ ಶ್ರೀ ಪಾರ‍್ವತಿದೇವಿ
ರುಂಡಮಾಲೆಯ ದರಿಸಿ ಮೆರೆವ ರುದಿರದಾರಿಣಿ
ಮೋಕ್ಶದಾಯಿನಿ ಶ್ರೀ ಪಾರ‍್ವತಿದೇವಿ

ಬುದಜನರೊಂದಿತೆ ವಿಪ್ರಕುಲೋತ್ತಮೆ ಮಹಾಮಾತೆ
ಅಂಬಾ ಬವಾನಿ ಶಾಕಾಂಬರಿಯೆ
ಶುಂಬನಿಶುಂಬರ ರಕ್ತವ ಕುಡಿದ ಚಂಡಿಚಾಮುಂಡಿ
ಪುಣ್ಯದಾಯಿನಿ ಶ್ರೀ ಪಾರ‍್ವತಿದೇವಿ

ಚಂದ್ರಗಂಟಳಾಗಿ ಮೆರೆವ ಕಾಳರಾತ್ರಿಯ ಕಳೆಯಲ್ಲಿ
ಮಂದಸ್ಮಿತಳಾಗಿ ಮಿನುಗುವಳು
ಸ್ಕಂದಮಾ ಪಂಚಶಿರ ಕಾರ‍್ತಿಕೇಯನ ತಾಯಿಯಾದ
ಹರ‍್ಶದಾಯಿನಿ ಶ್ರೀ ಪಾರ‍್ವತಿದೇವಿ

ಉಮೆಯಾಗಿ ಶಿವನನ್ನು ವರಿಸುವ ತಪಜಪದಲಿ
ನಿರತಳಾದ ಬ್ರಮರಾಂಬಿಕೆ
ಮಹಾಗೌರಿಯವತಾರದಿ ಪರಿಶುದ್ದ ಮನವ ಕರುಣಿಸಿದ
ಪುಣ್ಯದಾಯಿನಿ ಶ್ರೀ ಪಾರ‍್ವತಿದೇವಿ

ಅಬಿನವನ ಅಬಿಶ್ಟಗಳನು ಅವಿರತವಾಗಿ ಈಡೇರಿಸಿದ
ಸಿದ್ದಿದಾತ್ರಿ ಪರಮೇಶ್ವರಿ ಕಾತ್ಯಾಯಿನಿ
ವ್ಯಾಗ್ರವಾಹನದಾರಿ ವಿಪ್ರಕುಲಪೂಜಿತೆ ಲಲಿತಾಂಬ
ಮೋಕ್ಶದಾಯಿನಿ ಶ್ರೀ ಪಾರ‍್ವತಿದೇವಿ

( ಚಿತ್ರಸೆಲೆ : rediff.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: