ಚಿಕನ್ ಚಾಪ್ಸ್
– ನಿತಿನ್ ಗೌಡ.
ಬೇಕಾಗುವ ಸಾಮಾನುಗಳು
- ಚಿಕನ್ – 1/2 ಕಿಲೋ
- ಈರುಳ್ಳಿ – 2
- ಚಕ್ಕೆ – 2 ಕಡ್ಡಿ
- ಲವಂಗ – 4
- ಏಲಕ್ಕಿ – 1
- ಅರಿಶಣ – 1/2 ಚಮಚ
- ಶುಂಟಿ – 1 ಇಂಚು
- ಹಸಿ ಮೆಣಸಿನ ಕಾಯಿ – 4-5
- ಕೊತ್ತಂಬರಿ ಸೊಪ್ಪು – 1/2 ಕಟ್ಟು
- ಬೆಳ್ಳುಳ್ಳಿ – 10 -12 ಎಸಳು
- ಪುದೀನ – 2 ಎಸಳು
- ಗೋಡಂಬಿ – 4
- ಕಾಳುಮೆಣಸು – 5-6
- ಉಪ್ಪು – ರುಚಿಗೆ ತಕ್ಕಶ್ಟು
- ಟೊಮೊಟೊ – 1
- ಎಣ್ಣೆ – 4-5 ಚಮಚ
ಮಾಡುವ ಬಗೆ:
ಮೊದಲಿಗೆ ಒಂದು ಹಂಚು ಅತವಾ ಬಾಂಡಲಿಯಲ್ಲಿ ಸ್ವಲ್ಪ ಎಣ್ಣೆ ಹಾಕಿ 1.5 ಹೆಚ್ಚಿದ ಈರುಳ್ಳಿ, ಚಕ್ಕೆ, ಲವಂಗ, ಕಾಳಮೆಣಸು, ಏಲಕ್ಕಿ, ಕಾಲು ಚಮಚ ಅರಿಶಿಣ, ಕೊತ್ತಂಬರಿ ಸೊಪ್ಪು (ಚಿಕ್ಕದಾಗಿ ಕತ್ತರಿಸಿಕೊಂಡಿರಬೇಕು), ಹಸಿಮೆಣಸಿನಕಾಯಿ, 1/2 ಟೊಮೊಟೊ, ಗೋಡಂಬಿ, ಪುದೀನ, ಶುಂಟಿ ಮತ್ತು ಬೆಳ್ಳುಳ್ಳಿಯನ್ನು ಸೇರಿಸಿ 2 ನಿಮಿಶ ನಡು ಉರಿಯ ಬೆಂಕಿಯಲ್ಲಿ ಹುರಿದುಕೊಳ್ಳಿ. ಹೀಗೆ ಹುರಿದುಕೊಂಡ ಮೇಲೆ, ಒಂದು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ.ಈ ಗಸಿ ದಪ್ಪಗೆ ಬೇಕಾದಲ್ಲಿ ನೀರು ಕಡಿಮೆ ಹಾಕಿ.
ಈಗ ಚಿಕನ್ ತೊಳೆದು ಒಂದು ತಟ್ಟೆಯಲ್ಲಿ ಇಟ್ಟುಕೊಳ್ಳಿ. ಒಂದು ಪಾತ್ರೆಗೆ 4 ಚಮಚ ಎಣ್ಣೆ, 1/2 ಈರುಳ್ಳಿ, 1/2 ಟೊಮೊಟೊ ಹಾಕಿ ಹುರಿದುಕೊಳ್ಳಿ. ನಂತರ ತೊಳೆದಿಟ್ಟ ಚಿಕನ್ ಹಾಕಿ, ಕಾಲು ಚಮಚ ಅರಿಶಿಣ, ರುಚಿಗೆ ತಕ್ಕಶ್ಟು ಉಪ್ಪು ಹಾಕಿ 10-15 ನಿಮಿಶ ಬೇಯಿಸಿಕೊಳ್ಳಿ. ಆಮೇಲೆ ಮಿಕ್ಸಿಯಲ್ಲಿ ಮಾಡಿದ ಗಸಿಯನ್ನು ಚಿಕನ್‌ಗೆ ಹಾಕಿ, ಸ್ವಲ್ಪ ನೀರು ಹಾಕಿ 10-15 ನಿಮಿಶ ಬೇಯಲು ಬಿಡಿ. ಈಗ ಬಿಸಿ ಬಿಸಿ ಚಿಕನ್ ಚಾಪ್ಸ್ ತಯಾರಾಗಿದೆ. ಇದನ್ನು ಅಕ್ಕಿ ರೊಟ್ಟಿ, ಚಪಾತಿ ಮತ್ತು ನೀರು ದೋಸೆಯ ಜೊತೆ ತಿನ್ನಲು ಬಹಳ ಚೆನ್ನಾಗಿರುತ್ತದೆ.
ಇತ್ತೀಚಿನ ಅನಿಸಿಕೆಗಳು