ಕವಿತೆ: ದೇಶ ಕಟ್ಟುವಾ
– ವೆಂಕಟೇಶ ಚಾಗಿ.
ದೇಶ ಕಟ್ಟುವಾ ಬನ್ನಿ ಗೆಳೆಯರೇ
ಶಾಂತಿ ಸ್ನೇಹ ಸೌಹಾರ‍್ದ ಐಕ್ಯತೆಯ
ದೇಶ ಕಟ್ಟುವಾ ನಾವು
ದೇಶ ಕಟ್ಟುವಾ
ದುಡಿಮೆಯೇ ದೇವರೆಂದು
ನಂಬಿದಂತ ನಾವೇ ದನ್ಯರು
ದೇಶವನ್ನು ಪ್ರಗತಿಯತ್ತ ನಡೆಸಲು
ದ್ರುಡವಾದ ಚಲತೊಟ್ಟ ನಾವೇ ದನ್ಯರು
ದುಡಿಯುವಾ ಬನ್ನಿ ಗೆಳೆಯರೇ
ಅಬಿವ್ರುದ್ದಿಯ ದೇಶವನ್ನು
ನಾವು ಕಟ್ಟುವಾ
ಆಂತರಿಕ ಶತ್ರುಗಳನು
ದಮನಗೈವ ಚಲವಿದೆ
ಹಗಲಿರುಳು ಗಡಿಕಾಯ್ವ
ಸಿಂಹಬಲದ ಸೈನ್ಯವಿದೆ
ಬಾರತೀಯರೆಂಬ ಹೆಮ್ಮೆ ಇಂದೇ
ಎಲ್ಲರಲ್ಲೂ ಮೂಡಿ ಬರಲು
ಹೋರಾಡುವಾ ನಾವು ಬನ್ನಿ ಗೆಳೆಯರೇ
ನಮ್ಮ ನೆಲವ ರಕ್ಶಣೆಗೆ
ಮುಂದೆ ಸಾಗುವಾ
ಇತಿಹಾಸದ ತಪ್ಪುಗಳನು
ಮತ್ತೆ ಮತ್ತೆ ಮಾಡೆವು
ಶಿಕ್ಶಣದ ಕ್ರಾಂತಿ ಮೊಳಗೆ
ಸಾಕ್ಶರತೆಯ ಬೆಳಗುವೆವು
ಕುಟಿಲ ಜನರ ಕಪಟವನು
ಅರಿತು ದವನ ಗೈಯುವೆವು
ವಿದ್ಯೆ ಬಿತ್ತುವಾ ನಾವು ಬನ್ನಿ ಗೆಳೆಯರೇ
ಎಲ್ಲರೆದೆಯ ಬಯಲಿನಲ್ಲಿ
ಜ್ನಾನ ಹರಡುವಾ
ಬಡವನಿರಲಿ ದನಿಕನಿರಲಿ
ಸಮಾನತೆಯ ಸಾರುವಾ
ದೀನದಲಿತ ಬಡವ ಎಲ್ಲರೂ
ಬೆಳೆಯಲೆಂದು ದುಡಿಯುವಾ
ಸದ್ರುಡ ಸರಕಾರವು ನಮ್ಮಿಂದಲೇ ಸಾದ್ಯ
ದ್ರುಡ ಸಂಕಲ್ಪವಿರಲು ಎಂದಿಗೂ ಅಬೇದ್ಯ
ದೇಶ ಕಟ್ಟುವಾ ನಾವು ಬನ್ನಿ ಗೆಳೆಯರೇ
ಜಗವೇ ಮೆಚ್ಚಿಕೊಳ್ಳುವಂತ
ದೇಶ ಕಟ್ಟುವಾ
(ಚಿತ್ರ ಸೆಲೆ: pixabay.com)
ಇತ್ತೀಚಿನ ಅನಿಸಿಕೆಗಳು