ಕವಿತೆ: ಕನಸಾಗಿ ಬಂದೆಯಲ್ಲ
ವನದ ಸಿರಿಯಾಗಿ ಬಿನದ ಕನಸಾಗಿ
ಎದೆಯಲ್ಲಿ ಬಂದೆಯಲ್ಲ
ತನನ ನುಡಿಸುತ್ತ ಮನಸ ಕದಿಯುತ್ತ
ಎದುರಲ್ಲಿ ನಿಂದೆಯಲ್ಲ
ಸಲುಗೆ ತೋರುತಲಿ ನಿಲುವ ತಳೆಯುತ್ತ
ನ್ರುತ್ಯವ ಗೈದಿಹೆಯಲ್ಲ
ಹಲವು ರೀತಿಯಲಿ ಒಲವು ಕೋರುತಲಿ
ಕಂಗಳಲ್ಲಿ ಕೊಂದೆಯಲ್ಲ
ಗೆಲುವ ಬಾವದಲಿ ಬಲವ ಪ್ರದರ‍್ಶಿಸಿ
ನಲ್ಲನ ವರಿಸಿಹೆಯಲ್ಲ
ನಲುಮೆ ಚುಂಬನದಿ ಮೆಲುತ ಹ್ರುದಯದಿ
ಕುಶಿಯಲ್ಲಿ ನೆಂದೆಯಲ್ಲ
ತರುಣಿ ಶೋಡಸಿ ತರುಣ ಸುಮವಾಸಿ
ನಿದಿರೆಯ ಅಪಹರಿಸಿದೆ
ಹರಿಣಿ ಲೋಚನದಿ ವರನ ಶೋದಿಸುತ
ಗಂಗೆಯಲ್ಲಿ ಮಿಂದೆಯಲ್ಲ
ಅಂಗನೆ ಮೋಹದೊಳು ರಂಗನು ಚೆಲ್ಲುತ
ಅಬಿನವನ ಕವಿತೆಯಾದೆಯಲ್ಲ
ಚಂಗನೆ ಹಾರುತಿಹ ಬ್ರುಂಗದ ನಾದದೊಳು
ಎಲೆಯಲ್ಲಿ ಕಾದೆಯಲ್ಲ
(ಚಿತ್ರ ಸೆಲೆ: pxhere.com)
ಇತ್ತೀಚಿನ ಅನಿಸಿಕೆಗಳು