ತವಾ ಪಲಾವ್

– ಸವಿತಾ.

tava palav

ಬೇಕಾಗುವ ಸಾಮಾನುಗಳು

 • ಅಕ್ಕಿ – 3 ಬಟ್ಟಲು
 • ಈರುಳ್ಳಿ – 2
 • ಆಲೂಗಡ್ಡೆ – 2
 • ದಪ್ಪ ಮೆಣಸಿನಕಾಯಿ – 2
 • ಟೊಮೋಟೊ – 4
 • ಬಟಾಣಿ ಕಾಳು – 1/2 ಬಟ್ಟಲು
 • ಹಸಿ ಶುಂಟಿ – 1/2 ಇಂಚು
 • ಬೆಳ್ಳುಳ್ಳಿ – 6 ಎಸಳು
 • ಕೊತ್ತಂಬರಿ ಸೊಪ್ಪು – 1 ಬಟ್ಟಲು
 • ಗರಮ್ ಮಸಾಲಾ ಪುಡಿ – 1 ಚಮಚ
 • ಒಣ ಕಾರದ ಪುಡಿ 1 ಚಮಚ
 • ಅರಿಶಿಣ ಪುಡಿ ಸ್ವಲ್ಪ
 • ಎಣ್ಣೆ 4-5 ಚಮಚ
 • ಉಪ್ಪು – ರುಚಿಗೆ ತಕ್ಕಶ್ಟು
 • ಪಾವ್ ಬಾಜಿ ಮಸಾಲಾ ಪುಡಿ – 2 ಚಮಚ

ಪಾವ್ ಬಾಜಿ ಮಸಾಲಾ ಮಾಡಲು ಬೇಕಾಗುವ ಸಾಮಾನುಗಳು

 • ಏಲಕ್ಕಿ – 1
 • ಕೊತ್ತಂಬರಿ ಕಾಳು – 2 ಚಮಚ
 • ಸೋಂಪು – 1/2 ಚಮಚ
 • ಒಣ ಮೆಣಸಿನ ಕಾಯಿ – 2
 • ಚಕ್ಕೆ – 1 ಇಂಚು
 • ಲವಂಗ – 3
 • ಮಾವಿನ ಕಾಯಿ ಒಣ ಪುಡಿ – ಸ್ವಲ್ಪ
 • ನಿಂಬೆ ಹಣ್ಣಿನ ರಸ – 1/2 ಚಮಚ (ಬೇಕಿದ್ದರೆ)

ಪಾವ್ ಬಾಜಿ ಮಸಾಲಾ ಪುಡಿ ಮಾಡುವ ಬಗೆ

ಮಾವಿನ ಕಾಯಿ ಪುಡಿ ಒಂದು ಬಿಟ್ಟು ಎಲ್ಲ ಹುರಿದು ಪುಡಿ ಮಾಡಿ ಇಟ್ಟುಕೊಳ್ಳಿ. ಆಮೇಲೆ ಮಾವಿನ ಕಾಯಿ ಪುಡಿ ಸೇರಿಸಿ. ನಿಂಬೆ ರಸ ಕೊನೆಗೆ ಸೇರಿಸಿ ಕೊಳ್ಳಿ,

ತವಾ ಪಲಾವ್ ಮಾಡುವ ಬಗೆ

ಅಕ್ಕಿ ತೊಳೆದು ಅನ್ನ ಮಾಡಿ ಇಟ್ಟುಕೊಳ್ಳಿ, 2 ಆಲೂಗಡ್ಡೆ ಕುದಿಸಿ, ಈರುಳ್ಳಿ, ದಪ್ಪ ಮೆಣಸಿನ ಕಾಯಿ, ಟೊಮ್ಯಾಟೋ, ಕೊತ್ತಂಬರಿ ಸೊಪ್ಪು ಕತ್ತರಿಸಿ ಇಟ್ಟುಕೊಳ್ಳಿ. ಹಸಿ ಬಟಾಣಿ ಕಾಳು ಇಲ್ಲದಿದ್ದರೆ ಒಣ ಬಟಾಣಿ ಕಾಳು ನೆನೆಸಿ ಬಳಸಿಕೊಳ್ಳಬಹುದು. ಹಸಿ ಶುಂಟಿ ಬೆಳ್ಳುಳ್ಳಿ ಪೇಸ್ಟ್ ಮಾಡಿಟ್ಟುಕೊಳ್ಳಿ. ಪಾವ್ ಬಾಜಿ ಮಸಾಲಾ ಹುರಿದು ಇಟ್ಟುಕೊಳ್ಳಿ.

ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಶುಂಟಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಹುರಿಯಿರಿ. ಕತ್ತರಿಸಿರುವ ಈರುಳ್ಳಿ, ದಪ್ಪ ಮೆಣಸಿನಕಾಯಿ, ಟೊಮೋಟೊ, ಕುದಿಸಿದ ಆಲೂಗಡ್ಡೆ ಪುಡಿ ಮಾಡಿ ಹಾಕಿ. ಬಟಾಣಿ ಕಾಳು ಸೇರಿಸಿ ಚೆನ್ನಾಗಿ ಹುರಿಯಿರಿ (ಬೇಕಾದರೆ ಬೇರೆ ತರಕಾರಿ ಸೇರಿಸಬಹುದು). ನಂತರ ಎರಡು ಚಮಚ ನೀರು ಸೇರಿಸಿ ಸ್ವಲ್ಪ ಕುದಿಸಿ. ಪಾವ್ ಬಾಜಿ ಮಸಾಲೆ ಮತ್ತು ಗರಮ್ ಮಸಾಲೆ ಪುಡಿ ಸೇರಿಸಿ. ರುಚಿಗೆ ತಕ್ಕಶ್ಟು ಉಪ್ಪು, ಚಿಟಿಕೆ ಅರಿಶಿಣ ಪುಡಿ ಮತ್ತು ಒಣ ಕಾರದ ಪುಡಿ ಸೇರಿಸಿ ಚೆನ್ನಾಗಿ ತಿರುಗಿಸಿ ಇಳಿಸಿ. ಅನ್ನ ಹಾಕಿ ಚೆನ್ನಾಗಿ ಕಲಸಿ ಮೇಲೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಉದುರಿಸಿ. ಈಗ ತವಾ ಪಲಾವ್ ಸವಿಯಲು ಸಿದ್ದ .

ಮೊಸರು ಬಜ್ಜಿ (ರಾಯತಾ) ಜೊತೆ ಅತವಾ ತರಕಾರಿ ಸಲಾಡ್ ಜೊತೆ ಸವಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications