ಕವಿತೆ: ಬದುಕು ಸುತ್ತುತ್ತಿದೆ ಈ ವೈರಾಣು ಸುತ್ತಾ
– ವಿನು ರವಿ.
ಇದಾವುದೀ ವೈರಾಣುವಿನ
ರಾಮಾಯಣ
ಹೆಚ್ಚುತ್ತಲೇ ಇದೆ ದಿನವೂ
ಮನೆ ಮನೆಯಲ್ಲು ತಲ್ಲಣ
ಸಾವಿರಾರು ವೈರಾಣುಗಳು
ನಮ್ಮ ಸುತ್ತ ಮುತ್ತ
ಇದೊಂದು ವೈರಾಣು ಮಾತ್ರ
ಕಟ್ಟುತ್ತಿದೆ ದಿನವೂ
ಸಾವಿನ ಹುತ್ತ
ಯಾವುದು ಸತ್ಯಾ
ಯಾವುದು ಮಿತ್ಯಾ
ಲೆಕ್ಕಾಚಾರದೊಳಗೆ ಬಸವಳಿದಿದೆ ಚಿತ್ತ
ಆಟವಿಲ್ಲ ಪಾಟವಿಲ್ಲ
ಕೆಲಸ ಕಾರ‍್ಯವೆಲ್ಲ ಅಸ್ತವ್ಯಸ್ತ
ಬದುಕು ಸುತ್ತುತ್ತಿದೆ
ಈ ವೈರಾಣು ಸುತ್ತಾ
ಸರಳವಾಗಿದೆ ಉಪಚಾರ
ಕೆಲವರಿಗಂತೂ ಬೇಕಾಗೆ ಇಲ್ಲ
ನಿಜವಾದ ಪರಿಹಾರ
ತಪ್ಪಿಲ್ಲ ಇನ್ನೂನು
ಸಾವು ನೋವಿನ ಹಾಹಾಕಾರ
ಕೊನೆಗಾಣದೆ ನಮ್ಮ
ನಡುವಿನ ಸ್ವಾರ‍್ತ ಅಹಂಕಾರ
ನಿಲ್ಲದು ಇಂತಹ
ನೂರಾರು ವೈರಾಣುಗಳ ಪ್ರಹಾರ
( ಚಿತ್ರ ಸೆಲೆ : wikipedia.org )
ನೈಸ್