ಕಾಶಿ ಹಲ್ವಾ
– ಸವಿತಾ.
ಬೇಕಾಗುವ ಸಾಮಾನುಗಳು
- ಬೂದುಗುಂಬಳಕಾಯಿ ತುರಿ – 4 ಲೋಟ
- ಸಕ್ಕರೆ ಅತವಾ ಬೆಲ್ಲದ ಪುಡಿ – 2 ಲೋಟ
- ಗೋಡಂಬಿ, ಬಾದಾಮಿ, ಒಣ ದ್ರಾಕ್ಶಿ – ತಲಾ 10
- ಏಲಕ್ಕಿ – 2
- ಲವಂಗ – 2
- ತುಪ್ಪ – 1 ಲೋಟ
- ಜಾಯಿಕಾಯಿ ಪುಡಿ – ಸ್ವಲ್ಪ
ಮಾಡುವ ಬಗೆ
ಬೂದುಗುಂಬಳಕಾಯಿ ತೊಳೆದು ಅರ‍್ದ ಕತ್ತರಿಸಿ, ಸಿಪ್ಪೆ ತೆಗೆದು, ತುರಿದು ಇಟ್ಟುಕೊಳ್ಳಿ. ಮೊದಲು ಮೂರು ಚಮಚ ತುಪ್ಪ ಬಿಸಿ ಮಾಡಿ, ಅದರಲ್ಲಿ ಗೋಡಂಬಿ, ಬಾದಾಮಿ, ಒಣ ದ್ರಾಕ್ಶಿ ಸ್ವಲ್ಪ ಹುರಿದು ತೆಗೆದಿಡಿ. ಅದೇ ಬಾಣಲೆಗೆ ತುಪ್ಪ ಸೇರಿಸಿ ಬೂದುಗುಂಬಳಕಾಯಿ ತುರಿ ಮತ್ತು ಅದು ಬಿಟ್ಟ ನೀರು ಹಾಕಿ ಚೆನ್ನಾಗಿ ಹುರಿಯಿರಿ. ಸಕ್ಕರೆ ಸೇರಿಸಿ ಚೆನ್ನಾಗಿ ತಿರುಗಿಸುತ್ತಾ ಇರಿ. ಸಕ್ಕರೆ ಕರಗಿ ನೀರಾಗಿ, ಎಲ್ಲ ಹೊಂದಿ ಗಟ್ಟಿಯಾದಾಗ ಒಲೆ ಆರಿಸಿ.
ಏಲಕ್ಕಿ, ಲವಂಗ ಮತ್ತು ಜಾಯಿಕಾಯಿ ಪುಡಿ ಮಾಡಿ ಹಾಕಿ ಮತ್ತು ಹುರಿದ ಗೋಡಂಬಿ, ಬಾದಾಮಿ, ಒಣ ದ್ರಾಕ್ಶಿ ಹಾಕಿ ಚೆನ್ನಾಗಿ ಕಲಸಿ. ಈಗ ಬಿಸಿ ಬಿಸಿ ಕಾಶಿ ಹಲ್ವಾ ಅತವಾ ಬೂದುಗುಂಬಳಕಾಯಿ ಹಲ್ವಾ ಸವಿಯಲು ಸಿದ್ದ. ಬೇಕಾದರೆ ಇನ್ನಶ್ಟು ತುಪ್ಪ ಹಾಕಿಕೊಂಡು ಸವಿಯಿರಿ.
ಕಾಶಿ ಹಲ್ವಾ ರುಚಿ ಸೊಗಸಾಗಿರುತ್ತೆ.