ಕವಿತೆ: ದರ‍್ಮದ ಸೋಲು

ನಿರಾಶೆ

ದರ‍್ಮ ಅದರ‍್ಮದ ಯುದ್ದದಲ್ಲಿ
ಸುಳ್ಳು ಅದರ‍್ಮದ ಪರವಾಗಿ ನಿಂತು
ದರ‍್ಮವ ಅದರ‍್ಮವೆಂದು,
ಅದರ‍್ಮವ ದರ‍್ಮವೆಂದು ತೋರಿಸಿತು

ಕಂಡ ಸುಳ್ಳನ್ನೇ ಸತ್ಯವೆಂದು ನಂಬಿ
ಮುಗ್ದ ಜನರು ಅದರ‍್ಮವ ಗೆಲ್ಲಿಸಿ
ದರ‍್ಮವ ಹೀನಾಯವಾಗಿ ಸೋಲಿಸಿದರು

ಸುಳ್ಳಿನ ಪ್ರಾಬಲ್ಯದ ಮುಂದೆ
ಸತ್ಯವು ಕಾಣದಾಗಿ ಹೋಯಿತು
ಸತ್ಯ ಗೊತ್ತಿದ್ದ ಕೆಲವರು
ದರ‍್ಮವು ತಾನಾಗೇ ಮೇಲೇಳಲಿ
ಎಂದು, ಪ್ರಯತ್ನವನ್ನೂ ಪಡದೆ ಸುಮ್ಮನಾದರು

ಇದೆಲ್ಲದರ ಪ್ರತಿಪಲವಾಗಿ
ಅದರ‍್ಮವು ರಾರಾಜಿಸತೊಡಗಿತು
ದರ‍್ಮವು ಮಕಾಡೆ ಮಲಗಿತು

(ಚಿತ್ರ ಸೆಲೆ: flickr.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: