ಮಾವಿನಕಾಯಿಯ ಸಂಬಾರ ಅಪ್ಪೆಹುಳಿ
– ಕಲ್ಪನಾ ಹೆಗಡೆ.
ಬೇಕಾಗುವ ಸಾಮಾನುಗಳು
- ಮಾವಿನಕಾಯಿ – 2
- ಸಾರಿನ ಪುಡಿ – 2 ಚಮಚ
- ಬೆಲ್ಲ – ಅರ‍್ದ ಕಪ್
- ಒಗ್ಗರಣೆಗೆ ಸ್ವಲ್ಪ ಎಣ್ಣೆ, ಸಾಸಿವೆಕಾಳು, ಜೀರಿಗೆ, ಕರಿಬೇವು ಮತ್ತು ಇಂಗು.
- ಒಣಮೆಣಸಿನಕಾಯಿ – 1
ಮಾಡುವ ಬಗೆ
ಮೊದಲು ಮಾವಿನಕಾಯಿಯನ್ನು ಚೆನ್ನಾಗಿ ತೊಳೆದು ಬೇಯಿಸಿಕೊಳ್ಳಬೇಕು. ಅದು ಆರಿದ ನಂತರ, ಬೆಂದ ಮಾವಿನಕಾಯಿಯ ಸಿಪ್ಪೆ ತೆಗೆದು ಚೆನ್ನಾಗಿ ಕಿವುಚಿ ಗೊರಟೆಯನ್ನು ತೆಗಿಯಬೇಕು. ಅದಕ್ಕೆ ಸ್ವಲ್ಪ ನೀರು, ಬೆಲ್ಲ, ಉಪ್ಪು ಸಾರಿನ ಪುಡಿ ಹಾಕಿ ಚೆನ್ನಾಗಿ ಕುದಿಸಬೇಕು. ಒಗ್ಗರಣೆಗೆ ಸಲ್ಪ ಎಣ್ಣೆ ಹಾಕಿ ಅದಕ್ಕೆ ಸಾಸಿವೆ ಕಾಳು, ಚಿಟಿಕೆ ಜೀರಿಗೆ, ಇಂಗು,ಕರಿಬೇವು ಮತ್ತು ಒಣಮೆಣಸಿನಕಾಯಿ ಹಾಕಿ ಒಗ್ಗರಣೆ ಮಾಡಿಕೊಳ್ಳಿ. ಈಗ ಮಾವಿನಕಾಯಿಯ ಸಂಬಾರ ಅಪ್ಪೆಹುಳಿ ತಯಾರಿದ್ದು, ಇದನ್ನು ಚಪಾತಿ, ದೋಸೆ ಮತ್ತು ಅನ್ನದೊಂದಿಗೆ ಸವಿಯಲು ನೀಡಬಹುದು.
nice