ಕವಿತೆ : ಬಾಳಿನ ಬಂಡಿ

– ಶಿವಮೂರ‍್ತಿ. ಹೆಚ್. ದಾವಣಗೆರೆ.

ಆಡುವ ಬಾಯಿಗಳಿಗೆ ಅಂಜದೇ
ಕೆಡಿಸುವ ಕೈಗಳಿಗೆ ಸೋಲದೇ
ನೋಡುವ ಕಂಗಳಿಗೆ ಹೆದರದೇ
ದೂಡಬೇಕು ಬಾಳಿನ ಬಂಡಿ

ಒಡಲ ಹಸಿವನು ನೀಗಿಸಲು
ಉಡಲು ಬಟ್ಟೆ ಸಂಪಾದಿಸಲು
ಕಡು ಕಶ್ಟಗಳಿಂದ ಪಾರಾಗಲು
ದೂಡಬೇಕು ಬಾಳಿನ ಬಂಡಿ

ಮಡದಿ ಮಕ್ಕಳನು ಸಾಕಲು
ಒಡವೆ ಬಂಗಾರ ಕೂಡಿಡಲು
ಬಡತನದ ಬೇಗೆ ತಣಿಸಲು
ದೂಡಬೇಕು ಬಾಳಿನ ಬಂಡಿ

ಹಡೆದವರ ಹೆಸರನ್ನ ಉಳಿಸಲು
ಪಡಸಾಲೆ ಮನೆಯೊಂದ ಕಟ್ಟಲು
ಎಡವಿ ಬೀಳದಂತೆ ಮೇಲೇಳಲು
ದೂಡಬೇಕು ಬಾಳಿನ ಬಂಡಿ

( ಚಿತ್ರಸೆಲೆ : thriveglobal.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: