ಬಾಳೆಹಣ್ಣಿನ ಸಿಹಿ ತಿಂಡಿ

– ಸವಿತಾ.

ಬೇಕಾಗುವ ಸಾಮಾನುಗಳು

  • ತುಪ್ಪ – 5 ಚಮಚ
  • ಏಲಕ್ಕಿ ಬಾಳೆ ಹಣ್ಣು – 3
  • ಬೆಲ್ಲದ ಪುಡಿ – 1 ಲೋಟ
  • ಗೋದಿ ಹಿಟ್ಟು – 1 ಲೋಟ
  • ಏಲಕ್ಕಿ – 2 (ಪುಡಿ ಮಾಡಿದ)
  • ಹಸಿ ಕೊಬ್ಬರಿ ತುರಿ – 1/2 ಬಟ್ಟಲು

ಮಾಡುವ ಬಗೆ

ಗೋದಿ ಹಿಟ್ಟಿಗೆ ತುಪ್ಪ ಹಾಕಿ ಚೆನ್ನಾಗಿ ಹುರಿಯಿರಿ. ಅದರಲ್ಲಿ ಹಸಿ ಕೊಬ್ಬರಿ ತುರಿ ಮತ್ತು ಬಾಳೆಹಣ್ಣು ಸೇರಿಸಿ ಹುರಿದು ತೆಗೆಯಿರಿ. ಬೆಲ್ಲದ ಪುಡಿಗೆ ಸ್ವಲ್ಪ ನೀರು ಹಾಕಿ ಕರಗಿಸಿ. ಬೆಲ್ಲದ ನೀರಿಗೆ ಹುರಿದ ಹಿಟ್ಟಿನ ಮಿಶ್ರಣ ಸೇರಿಸಿ ಚೆನ್ನಾಗಿ ಕಲಸಿ, ಇದಕ್ಕೆ ಏಲಕ್ಕಿ ಪುಡಿ ಹಾಕಿ ಕಲಸಿ ಇಟ್ಟುಕೊಳ್ಳಿ (ಬೇಕಾದರೆ ಗೋಡಂಬಿ, ಒಣ ದ್ರಾಕ್ಶಿ ತುಪ್ಪದಲ್ಲಿ ಹುರಿದು ಸೇರಿಸಿ ಕೊಳ್ಳಬಹುದು).

ಒಂದು ಅಗಲವಾದ ಪಾತ್ರೆಗೆ ತುಪ್ಪ ಸವರಿ, ಕಲಸಿದ ಹಿಟ್ಟು ಹಾಕಿ. ಕುಕ್ಕರ್ ನಲ್ಲಿ ತಳಕ್ಕೆ ನೀರು ಹಾಕಿ, ಒಂದು ತಟ್ಟೆ ಇಟ್ಟು, ಅದರ ಮೇಲೆ ಪಾತ್ರೆ ಇಟ್ಟು ಮುಚ್ಚಳ ಮುಚ್ಚಿ. ಕುಕ್ಕರ್ ನಲ್ಲಿ ಅನ್ನ ಬೇಯಿಸಿದ ಹಾಗೇ ಮೂರು ಕೂಗು ಕೂಗಿಸಿ, ಬೇಯಿಸಿ ತೆಗೆಯಿರಿ. ಆಮೇಲೆ ಬೇಕಾದ ಆಕಾರಕ್ಕೆ ಕತ್ತರಿಸಿ ಇಟ್ಟುಕೊಳ್ಳಿ. ಬಾಳೆಹಣ್ಣಿನ ಸಿಹಿ ತಿಂಡಿ ಸವಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: