ಕಡಲೆಕಾಳು ದೋಸೆ
– ಸವಿತಾ.
ಬೇಕಾಗುವ ಸಾಮಾನುಗಳು
- ಕಡಲೆಕಾಳು – 1 ಲೋಟ
- ಅಕ್ಕಿ – 1 ಲೋಟ
ಮಾಡುವ ಬಗೆ
ಕಡಲೆಕಾಳು, ಅಕ್ಕಿ ತೊಳೆದು ನೀರಿನಲ್ಲಿ ನೆನೆಹಾಕಿ, ರಾತ್ರಿಯಿಡೀ ನೆನೆಯಲು ಬಿಡಬೇಕು. ( ಕನಿಶ್ಟ ಎಂಟು ತಾಸು ನೆನೆಯಬೇಕು).
ಮರುದಿನ ಬೆಳಿಗ್ಗೆ ಮಿಕ್ಸರ್ ನಲ್ಲಿ ನುಣ್ಣಗೆ ರುಬ್ಬಿ ಇಟ್ಟುಕೊಳ್ಳಿ. ಹುದುಗು ಬರಿಸುವುದು ಬೇಡ. ಸ್ವಲ್ಪ ಉಪ್ಪು ಸೇರಿಸಿ ಚೆನ್ನಾಗಿ ತಿರುಗಿಸಿ. ನಂತರ ಕಾದ ತವೆಯ ಮೇಲೆ ಎಣ್ಣೆ ಹಾಕಿ ದೋಸೆ ಹುಯ್ದು ಬೇಯಿಸಿ ತೆಗೆಯಿರಿ. ಈಗ ಕಡಲೇ ಕಾಳು ದೋಸೆ ಸವಿಯಲು ಸಿದ್ದ. ಚಟ್ನಿ, ಪಲ್ಯ ಅತವಾ ಸಾಂಬಾರ್ ಜೊತೆ ಸವಿಯಿರಿ.
ಇತ್ತೀಚಿನ ಅನಿಸಿಕೆಗಳು