ಬೇಳೆ ಕಿಚಡಿ

– ವಿಜಯಮಹಾಂತೇಶ ಮುಜಗೊಂಡ.

ಬೇಕಾಗುವ ಸಾಮಾನುಗಳು

  • ಹೆಸರು ಬೇಳೆ – 1 ಲೋಟ
  • ತೊಗರಿ ಬೇಳೆ – 1 ಲೋಟ
  • ಅಕ್ಕಿ (ನುಚ್ಚಕ್ಕಿ) – 1 ಲೋಟ
  • ಉದ್ದಿನ ಬೇಳೆ – 1 ಚಮಚ
  • ಬೆಳ್ಳುಳ್ಳಿ – 8-10 ಎಸಳು
  • ಹಸಿ ಶುಂಟಿ – 2 ಇಂಚು
  • ಈರುಳ್ಳಿ – 1 ಸಣ್ಣದು
  • ಕರಿಬೇವು – 5 ಎಲೆ
  • ಎಣ್ಣೆ – 2 ಚಮಚ
  • ಹಸಿ ಮೆಣಸಿನಕಾಯಿ – 3-4
  • ಒಣ ಮೆಣಸಿನಕಾಯಿ – 4-5
  • ಕಾಳುಮೆಣಸು – 5
  • ಅರಿಶಿಣ ಪುಡಿ – ಚಿಟಿಕೆ
  • ಲವಂಗ – 4-5
  • ಚಕ್ಕೆ – 2-3
  • ಜೀರಿಗೆ – 1 ಚಮಚ
  • ಸಾಸಿವೆ – 1 ಚಮಚ
  • ಉಪ್ಪು – ರುಚಿಗೆ ತಕ್ಕಶ್ಟು
  • ಕೊತ್ತಂಬರಿ – 4 ದಂಟು

ಮಾಡುವ ಬಗೆ

ಒಂದೇ ಅಳತೆಯ ಅಕ್ಕಿ, ತೊಗರಿ ಬೇಳೆ ಮತ್ತು ಹೆಸರು ಬೇಳೆ ಸೇರಿಸಿ, ಅದಕ್ಕೆ 3 ಪಟ್ಟು ನೀರು, ಚಿಟಿಕೆ ಅರಿಶಿನ, ಒಂದು ಚಮಚ ಎಣ್ಣೆ, ರುಚಿಗೆ ತಕ್ಕಶ್ಟು ಉಪ್ಪು ಸೇರಿಸಿ ಕುಕ್ಕರ‍್‌ನಲ್ಲಿ ಕುದಿಸಲು ಇಡಿ. 4-5 ಸೀಟಿ ಹೊಡೆಯುವವರೆಗೆ ಕುದಿಸಿ. ಈರುಳ್ಳಿಯನ್ನು ಸಣ್ಣಗೆ ಉದ್ದುದ್ದಕ್ಕೆ ಹೆಚ್ಚಿಟ್ಟುಕೊಳ್ಳಿ. ಬೆಳ್ಳುಳ್ಳಿ ಮತ್ತು ಹಸಿ ಶುಂಟಿಯನ್ನು ಜಜ್ಜಿಟ್ಟುಕೊಳ್ಳಿ. ಕೊತ್ತಂಬರಿ ಬಿಡಿಸಿ ಇಟ್ಟುಕೊಳ್ಳಿ.

ಒಗ್ಗರಣೆಗೆ, ಒಂದು ಬಾಣಲೆಯಲ್ಲಿ 2 ಚಮಚ ಎಣ್ಣೆ ಬಿಸಿ ಮಾಡಿ, ಅದಕ್ಕೆ ಸಾಸಿವೆ, ಉದ್ದಿನ ಬೇಳೆ ಸೇರಿಸಿ ಸಿಡಿಸಿ. ಸಾಸಿವೆ ಸಿಡಿದ ಮೇಲೆ, ಜೀರಿಗೆ, ಲವಂಗ, ಚಕ್ಕೆ, ಕಾಳುಮೆಣಸು, ಹಸಿ ಮೆಣಸಿನಕಾಯಿ, ಕರಿಬೇವು, ಜಜ್ಜಿದ ಬೆಳ್ಳುಳ್ಳಿ, ಹಸಿ ಶುಂಟಿ, ಈರುಳ್ಳಿ ಸೇರಿಸಿ. ಈರುಳ್ಳಿ ಬೆಂದ ಮೇಲೆ ಒಣ ಮೆಣಸಿನಕಾಯಿ 2-3 ತುಂಡುಗಳಾಗಿ ಮುರಿದು ಸೇರಿಸಿ. ಕೊನೆಗೆ ಕುಕ್ಕರ‍್‌ನಲ್ಲಿ ಬೇಯಿಸಿದ ಅನ್ನ, ಬೇಳೆ ಮಿಶ್ರಣವನ್ನ ಹಾಕಿ ಚೆನ್ನಾಗಿ ಕಲಸಿ. ತುಂಬಾ ಗಟ್ಟಿಯಾಗದಂತೆ ಕಂಡರೆ 1/2 ಬಟ್ಟಲು ಬಿಸಿ ನೀರನ್ನು ಸೇರಿಸಿ ಕುದಿಸಿ.

ಸುಮಾರು 10-15 ನಿಮಿಶಗಳ ವರೆಗೆ ನಡು ಉರಿಯಲ್ಲಿ ಕುದಿಸಿ, ಮೇಲೆ ಕೊತ್ತಂಬರಿ ಸೇರಿಸಿ ಕಲಸಿದರೆ ಬೇಳೆ ಕಿಚಡಿ ಸವಿಯಲು ಸಿದ್ದ. ಕಿಚಡಿ ತಯಾರಾದ ಮೇಲೆ ತುಪ್ಪ ಹಾಕಿಕೊಂಡು ಸವಿಯಿರಿ. ಮೈಗೆ ಹುಶಾರಿಲ್ಲದಾಗ ಮತ್ತು ವಯಸ್ಸಾದವರಿಗೆ ಇದನ್ನು ನೀಡಲಾಗುತ್ತದೆ. ಮಕ್ಕಳಿಗೂ ಬೇಳೆ ಕಿಚಡಿ ಹಿಡಿಸುತ್ತದೆ.

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. savita kulkarni says:

    ಚೆನ್ನಾಗಿದೆ

ಅನಿಸಿಕೆ ಬರೆಯಿರಿ:

%d bloggers like this: