ಕವಿತೆ: ನೆನಪುಗಳು

– ಶ್ಯಾಮಲಶ್ರೀ.ಕೆ.ಎಸ್.

ನೀನೆಲ್ಲಿ ಮರೆಯಾದೆ

ಮನದ ಜೋಕಾಲಿಯಲ್ಲಿ
ನೆನಪುಗಳು ಜೀಕುತಿರೆ
ಬಾವವು ಬೆನ್ನೇರಿ
ಮೌನಕೂ ಮಾತು ಕಲಿಸಿದಂತಿದೆ

ನೆನಪಿನ ಹೂಬಳ್ಳಿಯಲ್ಲಿ
ಹಾಸ್ಯದ ಹನಿ ಜಿನುಗುತಿರೆ
ನಗುವಿನ ಮೊಗ್ಗರಳಿ
ಮನಸ್ಸು ಹಗುರವಾದಂತಿದೆ

ನೆನಪಿನ ಬಂಡಿಯಲ್ಲಿ
ಬೇಸರದ ಸರಕು ಸಾಗುತಿರೆ
ತುಸು ಬಾರವೆನಿಸಿ
ಜಗದ ದುಕ್ಕವೆಲ್ಲಾ ಎರಗಿ ಬಂದಂತಿದೆ

ನೆನಪಿನ ಗಣಿಯಲ್ಲಿ
ಹುದುಗಿದ ಮತ್ಸರವು ಕಾಡುತಿರೆ
ಕಿಚ್ಚು ಹೊತ್ತಿ
ಸಿಟ್ಟಿನ ಸಿಡಿ ಮದ್ದುಗಳು ಸಿಡಿದಂತಿದೆ

ನೆನಪಿನ ದೋಣಿಯಲ್ಲಿ
ಮದುರ ನೆನಪುಗಳು ಸುಳಿದಾಡುತಿರೆ
ಬಾಳಿನ ಪಯಣ ಸುಕಕರವಾಗಿ
ಬದುಕಿನ ತೀರ ಸೇರಬಯಸಿದೆ

(ಚಿತ್ರ ಸೆಲೆ: theguardian.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: