ಹಾಜ್ಮುಲಾ ಮೊಜಿಟೋ
– ನಿತಿನ್ ಗೌಡ.
ಬೇಕಾಗುವ ಸಾಮಾನುಗಳು:
- ಸೋಡಾ – ಮುಕ್ಕಾಲು ಲೋಟ
- ಮಂಜುಗಡ್ಡೆ( ಐಸ್ ಕ್ಯೂಬ್ಸ್) – 2
- ಪುದೀನ – 5 ರಿಂದ 6 ಎಲೆ
- ಹಾಜ್ಮುಲ – 2 ಪೊಟ್ಟಣ ( ಪುಡಿ ಮಾಡಿದ್ದು)
- ನಿಂಬೆ ರಸ – 3 ಚಮಚ
ಮಾಡುವ ಬಗೆ
ಮೊದಲಿಗೆ ಒಂದು ಲೋಟಕ್ಕೆ 3 ಮಂಜುಗಡ್ಡೆಯ ಚೂರನ್ನು ಹಾಕಿ, ಇದಕ್ಕೆ ಕುಟ್ಟಿ ಪುಡಿಮಾಡಿಟ್ಟುಕೊಂಡ ಹಾಜ್ಮುಲಾವನ್ನು ಹಾಕಿ. ಆಮೇಲೆ ಪುದೀನ ಎಲೆಗಳನ್ನು ಚಿಕ್ಕದಾಗಿ ಕತ್ತರಿಸಿ ಹಾಕಿ. ಆಮೇಲೆ 3 ಚಮಚ ನಿಂಬೆರಸವನ್ನು ಹಾಕಿ. ಈಗ ಇದಕ್ಕೆ ಸೋಡಾವನ್ನು ಮೆಲ್ಲನೆ ಹಾಕಿ(ನೊರೆ ಉಕ್ಕುವುದು). ಈಗ ಹಾಜ್ಮುಲಾ ಮೊಜಿಟೋ ಕುಡಿಯಲು ತಯಾರಿದೆ.
ಇದನ್ನು ನಿಂಬೆಯ ದುಂಡನೆ ಹೋಳಿನಿಂದ ಮತ್ತು ಪುದೀನ ಎಲೆಯನ್ನು ಬಳಸಿ ಅಲಂಕರಿಸಬಹುದು.
ಹಾಜ್ಮುಲಾ ಬದಲು ಚಾಟ್ ಮಸಾಲೆ ಕೂಡ ಬಳಸಬಹುದು, ಆಗ ಅದನ್ನು ಮಸಾಲೆ ಮೊಜಿಟೋ ಅನ್ನಬಹುದೇನೋ!
ಇತ್ತೀಚಿನ ಅನಿಸಿಕೆಗಳು