ಅನ್ನದ ತಾಲಿಪೆಟ್ಟು
ಬೇಕಾಗುವ ಸಾಮಾನುಗಳು
- ಅಕ್ಕಿ/ಅನ್ನ – 2 ಬಟ್ಟಲು
- ಗೋದಿ ಹಿಟ್ಟು – 1/2 ಬಟ್ಟಲು
- ಒಣ ಮೆಣಸಿನಕಾಯಿ ಪುಡಿ – 1 ಚಮಚ
- ಈರುಳ್ಳಿ – 1
- ಜೀರಿಗೆ – 1 ಚಮಚ
- ಕರಿಬೇವು – 4-5 ಎಲೆ
- ಕೊತ್ತಂಬರಿ – 2 ದಂಟು
- ಅರಿಶಿಣ ಪುಡಿ – ಚಿಟಿಕೆ
- ಉಪ್ಪು – ರುಚಿಗೆ ತಕ್ಕಶ್ಟು
- ಎಣ್ಣೆ – 2 ಚಮಚ
ಮಾಡುವ ಬಗೆ
ಅಕ್ಕಿ ತೊಳೆದುಕೊಂಡು ನೀರು ಜಾಸ್ತಿ ಸೇರಿಸಿ 2 ಬಟ್ಟಲು ಮೆತ್ತನೆಯ ಅನ್ನ ಮಾಡಿಟ್ಟುಕೊಳ್ಳಿ. ಹಿಂದಿನ ದಿನದ ಅನ್ನ ಉಳಿದಿದ್ದರೆ ಅದನ್ನು ಬಳಸಬಹುದು. ಅನ್ನಕ್ಕೆ ಗೋದಿ ಹಿಟ್ಟು, ಸಣ್ಣಗೆ ಹೆಚ್ಚಿದ ಈರುಳ್ಳಿ, ಒಣ ಮೆಣಸಿನಕಾಯಿ ಪುಡಿ, ಜೀರಿಗೆ, ಕತ್ತರಿಸಿದ ಕರಿಬೇವು, ಕೊತ್ತಂಬರಿ ಸೊಪ್ಪು, ಚಿಟಿಕೆ ಅರಿಶಿಣ ಪುಡಿ, ರುಚಿಗೆ ತಕ್ಕಶ್ಟು ಉಪ್ಪು ಸೇರಿಸಿ ಗಟ್ಟಿಯಾಗಿ ನಾದಿಕೊಳ್ಳಿ. ತುಂಬಾ ಗಟ್ಟಿಯಾಗಿದ್ದರೆ ಸ್ವಲ್ಪ ನೀರು ಸೇರಿಸಿಕೊಳ್ಳಿ.
ಒಲೆಯ ಮೇಲೆ ತವೆ ಇಟ್ಟು ಬಿಸಿಮಾಡಿ. ಮೊದಲೇ ಮಾಡಿಟ್ಟುಕೊಂಡ ಹಿಟ್ಟನ್ನು ಒಂದು ಕೈಯಲ್ಲಿ ಬರುವಶ್ಟು ದೊಡ್ಡ ಉಂಡೆ ಮಾಡಿಕೊಂಡು ತೆಳ್ಳನೆಯ ಹತ್ತಿ ಬಟ್ಟೆ ಮೇಲೆ ನೀರು ಚುಮುಕಿಸಿಕೊಂಡು ತಟ್ಟಿಕೊಳ್ಳಿ. ತುಂಬಾ ತೆಳ್ಳಗಾಗದಂತೆ ಹರಡಿದ ಮೇಲೆ, ತವೆಯ ಮೇಲೆ ಎಣ್ಣೆ ಹಾಕಿ 1 ನಿಮಿಶ ಬೇಯಿಸಿ. ಎರಡೂ ಬದಿಗೆ ಬೇಯಿಸಿಕೊಂಡರೆ ತಾಲಿಪೆಟ್ಟು ಸವಿಯಲು ತಯಾರು. ತುಪ್ಪ, ಉಪ್ಪಿನಕಾಯಿ ಇಲ್ಲವೇ ಮೊಸರಿನ ಜೊತೆಗೆ ಸವಿಯಬಹುದು.
(ಚಿತ್ರ ಸೆಲೆ: wikimedia.org)
ಇತ್ತೀಚಿನ ಅನಿಸಿಕೆಗಳು