ವಾಂಗಿ ಬದನೆಕಾಯಿ ಕರ‍್ರಿ

– ಸವಿತಾ.

ಬೇಕಾಗುವ  ಸಾಮಾನುಗಳು

 • ಹಸಿರು ಬದನೆಕಾಯಿ – 2
 • ಈರುಳ್ಳಿ – 1
 • ಹಸಿ ಮೆಣಸಿನಕಾಯಿ – 2
 • ಟೊಮೋಟೊ – 4
 • ಎಣ್ಣೆ – 3 ಚಮಚ
 • ಜೀರಿಗೆ – 1/4 ಚಮಚ
 • ಸಾಸಿವೆ – 1/4 ಚಮಚ
 • ಕರಿಬೇವು ಎಲೆ – 7-8
 • ಉಪ್ಪು ರುಚಿಗೆ ತಕ್ಕಶ್ಟು
 • ಅರಿಶಿಣ ಪುಡಿ ಸ್ವಲ್ಪ
 • ಗರಮ್ ಮಸಾಲೆ ಪುಡಿ – 3 ಚಮಚ
 • ಕೊತ್ತಂಬರಿ ಸೊಪ್ಪು ಸ್ವಲ್ಪ

ಮಾಡುವ ಬಗೆ

ಹಸಿರು ವಾಂಗಿ ಬದನೆಕಾಯಿ ಉದ್ದ ಕತ್ತರಿಸಿ, ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು ಸೇರಿಸಿ ಹಾಕಿ ಇಟ್ಟುಕೊಳ್ಳಿ. ಈರುಳ್ಳಿ, ಹಸಿ ಮೆಣಸಿನಕಾಯಿ, ಟೊಮೋಟೊ ತೊಳೆದು ಕತ್ತರಿಸಿ ಇಟ್ಟುಕೊಳ್ಳಿ. ಬಾಣಲೆಯನ್ನು ಒಲೆಯ ಮೇಲಿಟ್ಟು ಎಣ್ಣೆ ಹಾಕಿ ಬಿಸಿ ಮಾಡಿ. ಸಾಸಿವೆ, ಜೀರಿಗೆ, ಕರಿಬೇವು, ಹಸಿ ಮೆಣಸಿನ ಕಾಯಿ ಹಾಕಿ ಹುರಿಯಿರಿ. ಜೊತೆಗೆ ಕತ್ತರಿಸಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಕತ್ತರಿಸಿ ಇಟ್ಟ ಬದನೆಕಾಯಿ ಹಾಕಿ ಚೆನ್ನಾಗಿ ಹುರಿಯಿರಿ. ಆಮೇಲೆ ಟೊಮೋಟೊ ಹಾಕಿ ಹುರಿಯಿರಿ. ಉಪ್ಪು, ಅರಿಶಿಣ ಪುಡಿ, ಗರಮ್ ಮಸಾಲೆ ಪುಡಿ ಹಾಕಿ ತಿರುಗಿಸಿ. ಎರಡು ಲೋಟ ನೀರು ಹಾಕಿ ಒಂದು ಕುದಿ ಕುದಿಸಿ ಇಳಿಸಿ. ಕತ್ತರಿಸಿದ ಕೊತ್ತಂಬರಿ ಸೊಪ್ಪು ಸ್ವಲ್ಪ ಸೇರಿಸಿ. ಈಗ ವಾಂಗಿ ಬದನೇ ಕಾಯಿ ಕರ‍್ರಿ ಸವಿಯಲು ಸಿದ್ದ. ಚಪಾತಿ ಅತವಾ ಅನ್ನದ ಜೊತೆ ಸವಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: