ಕವಿತೆ: ಬೀಮ ಪಾಟವ ಮರೆಯುವುದು ಬೇಡ

ನಾಗರಾಜ್ ಬೆಳಗಟ್ಟ.

ಅಂಬೇಡ್ಕರ್

ಎಳಿ ಎದ್ದೇಳಿ ಬಂದುಗಳೆ
ಬೀಮ ಮುಶ್ಟಿ ಬಿಗಿದು ಎದ್ದೇಳಿ
‘ಬೀಮರಾವ್ ‘ರನ್ನು ಕಾಯುವುದು ಬೇಡ
ಬೀಮ ಪಾಟವ ಮರೆಯುವುದು ಬೇಡ

ಮೇಲು ಕೀಳನ್ನ ಹೊರಗಟ್ಟಿ
ದರ‍್ಮಗಳ ಬೇದಬಾವ ಕಂಡಿಸಿ
ಜಾತಿ ಮತವ ಕಾಲಲ್ಲಿ ಮೆಟ್ಟಿ
ಅನಿಶ್ಟ ಪದ್ದತಿಗಳ ಪಿಡುಗ ತೊಲಗಿಸೋಣ

ಮಹಿಳಾ ಕಾರ‍್ಮಿಕರ ದನಿಯಾಗಿ
ಶಿಕ್ಶಣ ಉದ್ಯೋಗ ನ್ಯಾಯವ ಪಡೆದು
ದಲಿತ ದಮನಿತರ ಬೀಮ ಬಲವಾಗಿ
ಅಸಮಾನತೆ ತೊಲಗಿಸಿ
ನವ ಬಾರತ ಕಟ್ಟೋಣ

ಅವಮಾನ ನಿಂದನೆಗಳನ್ನು ಸಹಿಸದೆ
ಶಿಕ್ಶಣ ಸಂಗಟನೆ ಹೋರಾಟ ಮರೆಯದೆ
ಜಾತಿ ವಿನಾಶದ ಜಾಗ್ರುತಿ ಮೂಡಿಸಿ
ಬ್ರಾತ್ರುತ್ವ ಸೌಹಾರ‍್ದತೆಯ ದೀಪ ಬೆಳಗಿಸೋಣ

ಸಾಕಿನ್ನು ಬಂದುಗಳೆ
ಉದಾಸೀನತೆ
ಅಸ್ಪ್ರುಶ್ಯತೆಯ ವಿರುದ್ದ
ಬೀಮ ಸೈನ್ಯ ಕಟ್ಟಿ
ಬೀಮ ಬಾರತದ
ನಿರ‍್ಮಾಣಕ್ಕೆ ಸಿದ್ದರಾಗೋಣ

ಎಳಿ ಎದ್ದೇಳಿ ಬಂದುಗಳೆ
ಬೀಮ ಮುಶ್ಟಿ ಬಿಗಿದು ಎದ್ದೇಳಿ
‘ಬೀಮರಾವ್ ‘ರನ್ನು ಕಾಯುವುದುಬೇಡ
ಬೀಮ ಪಾಟವ ಮರೆಯುವುದು ಬೇಡ

( ಚಿತ್ರಸೆಲೆ : wikipedia )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications