ಹೊನಲುವಿಗೆ 9 ವರುಶ ತುಂಬಿದ ನಲಿವು

– ಹೊನಲು ತಂಡ.

ದಿನವೂ ಹೊಸತನ ಹೊತ್ತು ಬೇರೆ ಬೇರೆ ವಿಶಯಗಳ ಬಗ್ಗೆ ಬರಹಗಳನ್ನು ಮೂಡಿಸುತ್ತ ಬಂದಿರುವ ಹೊನಲು ಮಾಗಜೀನ್‌ಗೆ ಇಂದು ಹುಟ್ಟುಹಬ್ಬದ ಸಡಗರ. ಓದುಗರಿಗೆ ಎಡೆಬಿಡದೇ ಹಲವಾರು ವಿಶಯಗಳ ಔತಣವನ್ನು ಬಡಿಸುತ್ತಿರುವ ಹೊನಲು ಇಂದು 9 ವರುಶಗಳನ್ನು ಪೂರೈಸಿ, 10ನೇ ವರುಶಕ್ಕೆ ಕಾಲಿಡುತ್ತಿದೆ.

ನುರಿತ ಬರಹಗಾರರಿಂದ ಬೇರೆ ಬೇರೆ ವಿಶಯಗಳನ್ನು ಓದುಗರ ಮುಂದೆ ಇಡುವುದರೊಟ್ಟಿಗೇ ಹೊಸ ಬರಹಗಾರರಿಗೆ ವೇದಿಕೆಯಾಗಬೇಕು ಎಂಬ ಆಶಯದಿಂದ ಹೊನಲು ಶುರುವಾಯಿತು. ಹೊನಲು ತನ್ನ 9ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ, 340ಕ್ಕೂ ಹೆಚ್ಚು ಬರಹಗಾರರು ಹೊನಲಿಗಾಗಿ ಬರಹ ಮಾಡಿರುವುದು ನಮಗೆ ಹೆಮ್ಮೆಯ ಸಂಗತಿ. ಇವರಲ್ಲಿ 20ಕ್ಕೂ ಹೆಚ್ಚು ಬರಹಗಾರರು 50ಕ್ಕಿಂತಲೂ ಹೆಚ್ಚು ಬರಹಗಳನ್ನು ಮಾಡಿದ್ದಾರೆ. 35ಕ್ಕೂ ಹೆಚ್ಚು ಬರಹಗಾರರು 25ಕ್ಕೂ ಹೆಚ್ಚು ಬರಹಗಳನ್ನು ಹೊನಲಿನ ಮೂಲಕ ಓದುಗರ ಮುಂದಿಟ್ಟಿದ್ದಾರೆ. ಹೊಸ ಹೊಸ ಬರಹಗಾರರು ಹೊನಲಿನ ಬಳಗವನ್ನು ಸೇರುತ್ತಲೇ ಇರುವುದು ನಲಿವಿನ ವಿಚಾರ.

ಬಿಟ್‌ಕಾಯಿನ್‌, ಐರನ್ ಡೋಮ್, ಮೆಟಾವರ್‍ಸ್‌ನಂತಹ ಹೊಸಗಾಲದ ಅರಿಮೆ ವಿಶಯಗಳು, ಬೇಸಾಯದ ಬಗ್ಗೆ ಮಾಹಿತಿ ನೀಡುವ ಹಲವಾರು ಬರಹಗಳು, ಕತೆ, ಕವಿತೆ, ಅಡುಗೆ, ಆಟೋಟ, ಸೋಜಿಗದ ಸಂಗತಿಗಳು – ಹೀಗೆ ಹತ್ತು ಹಲವಾರು ವಿಶಯಗಳ ಸುತ್ತ ಮೂಡಿಬರುತ್ತಿರುವ ಬರಹಗಳು ಹೊನಲಿನ ಮೆರುಗನ್ನು ಹೆಚ್ಚಿಸಿವೆ. ಶಿವಶರಣರ ವಚನಗಳ ಹುರುಳು ತಿಳಿಸುವ, ಸುಳುವಾಗಿ ವಿವರಿಸುವ 150ಕ್ಕೂ ಮೀರಿದ ಬರಹಗಳು ಇಲ್ಲಿವೆ.

ಹೊನಲಿನ ಹರವು ದಿನೇ ದಿನೇ ಹಿಗ್ಗುತ್ತಿದೆ. ಹೊನಲಿಗೆ ಜಗತ್ತಿನ 50ಕ್ಕಿಂತ ಹೆಚ್ಚು ನಾಡುಗಳಿಂದ ಓದುಗರು ಇದ್ದರೆ, ಕರ್‍ನಾಟಕದ ಎಲ್ಲಾ ಜಿಲ್ಲೆಗಳಿಂದ, ಬೇರೆ ಬೇರೆ ರಾಜ್ಯಗಳಿಂದಶ್ಟೇ ಅಲ್ಲದೇ ಹೊರನಾಡುಗಳಿಂದ ಬರಹಗಾರರು ತಮ್ಮ ಬರಹಗಳ ಕೊಡುಗೆ ನೀಡಿದ್ದಾರೆ. ಪೇಸ್‌ಬುಕ್ ಮತ್ತು ಟ್ವಿಟರ್‌ ಪುಟಗಳಿಗೆ ಹತ್ತು ಹಲವು ದೇಶಗಳಲ್ಲಿರುವ ಕನ್ನಡಿಗರು ಮೆಚ್ಚುಗೆ ಸೂಚಿಸುತ್ತ ಬಂದಿದ್ದಾರೆ. ಸುಮಾರು 8,000ಕ್ಕೂ ಹೆಚ್ಚು ಬಳಸುಗರು ಹೊನಲು ಆಂಡ್ರಾಯ್ಡ್ ಬಳಕವನ್ನು (app) ಬಳಸುತ್ತಿದ್ದಾರೆ.

ಹೊತ್ತು ಕೊಟ್ಟು ಹೊನಲಿಗಾಗಿ ಬರಹ ಮಾಡುತ್ತಿರುವ ಬರಹಗಾರರ ಶ್ರದ್ದೆ, ಕಾಳಜಿಯಿಂದ ಹೊನಲು ಇಂದು 3,700ಕ್ಕೂ ಹೆಚ್ಚು ಬರಹಗಳ ಕಣಜವಾಗಿದೆ. ಓದುಗರು ಹೊನಲಿನ ಬರಹಗಳನ್ನು ಓದುತ್ತಾ ಬರಹಗಾರರನ್ನು ಹುರಿದುಂಬಿಸುತ್ತಿರುವುದರಿಂದ ಹೊನಲು ಹಲವಾರು ಮೈಲುಗಲ್ಲುಗಳನ್ನು ದಾಟಲು ಸಾದ್ಯವಾಗುತ್ತಿದೆ.

ಬರಹಗಾರರ ಹುಮ್ಮಸ್ಸು, ಓದುಗರ ಬೆಂಬಲ ಹೊನಲಿನ ಬೆನ್ನೆಲುಬು. ಹೊನಲಿಗಾಗಿ ಹೊತ್ತು ಕೊಟ್ಟು ಬರಹ ಮಾಡುತ್ತಿರುವ ಎಲ್ಲ ಬರಹಗಾರರಿಗೂ, ಮೆಚ್ಚುಗೆ ಮತ್ತು ಬೆಂಬಲ ನೀಡುತ್ತಿರುವ ಎಲ್ಲರಿಗೂ ಮನದಾಳದ ನನ್ನಿ. ನಮ್ಮೆಲ್ಲ ಬರಹಗಾರರಿಗೂ, ಓದುಗರಿಗೂ, ಹಿತೈಶಿಗಳಿಗೂ ಮತ್ತೊಮ್ಮೆ ವಂದಿಸುವೆವು. ಹೊನಲಿಗೆ ನಿಮ್ಮ ಬೆಂಬಲ ಹೀಗೆಯೇ ಮುಂದುವರೆಯುತ್ತಿರಲಿ.

ಪೇಸ್‌ಬುಕ್‌ ಪುಟ : https://www.facebook.com/honalu.mimbagilu
ಟ್ವಿಟರ್ ಗೂಡು : https://twitter.com/honalunet
ಇನ್‌ಸ್ಟಾಗ್ರಾಂ: https://www.instagram.com/honalunet
ಹೊನಲು ಬಳಕ : https://play.google.com/store/apps/details?id=com.honalu

ನಿಮಗೆ ಹಿಡಿಸಬಹುದಾದ ಬರಹಗಳು

3 Responses

 1. C.P.Nagaraja says:

  ಸದಾ ಕಾಲ ನನ್ನನ್ನು ಓದು ಬರಹದಲ್ಲಿ ತೊಡಗಿಸಿರುವ ಹೊನಲು ಪತ್ರಿಕೆ, ಹೊನಲು ಸಂಪಾದಕ ವರ್ಗ ಮತ್ತು ಹೊನಲು ಓದುಗರಿಗೆ ನನ್ನ ಅನಂತ ವಂದನೆಗಳು.
  ಸಿ ಪಿ. ನಾಗರಾಜ

  • Annadanesh S says:

   ಹೊನಲಿಗೆ ನಿಮ್ಮ ಬೆಂಬಲ ಹೀಗೆ ಮುಂದುವರೆಯುತ್ತಿರಲಿ ಸರ್ 🙂

 2. Raghuramu N.V. says:

  ಹಾರ್ದಿಕ ಅಭಿನಂದನೆಗಳು.

ಅನಿಸಿಕೆ ಬರೆಯಿರಿ:

%d bloggers like this: