ರಬಡಿ
– ಸವಿತಾ.
ಬೇಕಾಗುವ ಸಾಮಾನುಗಳು
- ಹಾಲು – 1 ಲೀಟರ್
- ದಟ್ಟ ಕೆನೆ – 1/2 ಲೋಟ
- ಸಕ್ಕರೆ – 3 ಚಮಚ
- ಕೇಸರಿ ದಳಗಳು – 6
- ಗೋಡಂಬಿ – 10
- ಬಾದಾಮಿ – 10
- ಏಲಕ್ಕಿ – 2
ಮಾಡುವ ಬಗೆ
ಕೆನೆ ಹಾಲನ್ನು ಸಣ್ಣ ಉರಿಯಲ್ಲಿ ಕಾಯಿಸಿ ಅರ‍್ದಮಟ್ಟಕ್ಕೆ ಇಳಿಯುವ ವರೆಗೆ ಕುದಿಸಿ. ಸಕ್ಕರೆ ಮತ್ತು ಕೇಸರಿ ದಳಗಳ ಹಾಕಿ, ದಟ್ಟವಾಗುವ ವರೆಗೆ ಹಾಲನ್ನು ಕುದಿಸಿ ಇಳಿಸಿ. ಏಲಕ್ಕಿ ಪುಡಿ ಮಾಡಿ ಹಾಕಿ ಮತ್ತು ಗೋಡಂಬಿ ಬಾದಾಮಿ ಸಣ್ಣದಾಗಿ ಕತ್ತರಿಸಿ ಹಾಕಿರಿ. ಈಗ ರಬಡಿ ಸವಿಯಲು ಸಿದ್ದವಾಗಿದೆ. ಹಾಲು ಬೇಗ ಗಟ್ಟಿಯಾಗಲು ಬೇಕಾದರೆ ಗೋದಿ ಹಿಟ್ಟನ್ನು ಒಂದು ಇಲ್ಲವೆ ಎರಡು ಚಮಚ ಹಾಲಿನಲ್ಲಿ ಕಲಸಿ ಹಾಕಬಹುದು.
ಇತ್ತೀಚಿನ ಅನಿಸಿಕೆಗಳು