ಕವಿತೆ: ಮೌನ

– ವಿನು ರವಿ.

ನೆನಪು, Memories

ಬಾನ ತುಂಬಾ ಆವರಿಸುತ್ತಿದೆ ಮೋಡ
ಎದೆಯೊಳಗೆ ಹೇಳಲಾಗದ ದುಗುಡ

ಹೊಳಪು ಕಳೆದ ನೀಲ ಮಬ್ಬಿನಲಿ
ಯಾವುದೋ ರಾಗ ಮಿಡಿದ ಸುಳಿಯಲಿ

ಕರಗಿ ಹೋದ ಮಾತೊಂದು
ಮಂಜಾಗಿ ಇಳಿಯುತ್ತಿದೆ ದೂರದಲಿ

ಮೆಲುವಾಗಿ ಬೀಸುತ್ತಿರುವ ಗಾಳಿಯಲಿ
ಕದಡುತ್ತಿದೆ ಏಕಾಂತವು ಮೌನದಲಿ

ಮಡುಗಟ್ಟಿದ ಬೇಸರ ಕಂಡು
ಕರೆಯುತ್ತಿದೆ ತುಂತುರು ಹನಿ
ಜೋರಾದ ದನಿಯಲಿ

( ಚಿತ್ರಸೆಲೆ : cainellsworth.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: