ಮಿಶ್ರ ಹಿಟ್ಟಿನ ಉಂಡೆ
– ಸವಿತಾ.
ಬೇಕಾಗುವ ಸಾಮಾನುಗಳು
- ಗೋದಿ ಹಿಟ್ಟು – 1 ಲೋಟ
- ಜೋಳದ ಹಿಟ್ಟು – 1 ಲೋಟ
- ಸಣ್ಣ ಗೋದಿ ರವೆ – 1 ಲೋಟ
- ಒಣ ಕೊಬ್ಬರಿ ತುರಿ – 1 ಲೋಟ
- ಬೆಲ್ಲದ ಪುಡಿ – 4 ಲೋಟ
- ಏಲಕ್ಕಿ – 4
- ಒಣ ದ್ರಾಕ್ಶಿ ಸ್ವಲ್ಪ
- ಗೋಡಂಬಿ ಸ್ವಲ್ಪ
- ತುಪ್ಪ – 6 ಚಮಚ
ಮಾಡುವ ಬಗೆ
ಬಾಣಲೆ ಬಿಸಿ ಮಾಡಿ ಮೂರು ಚಮಚ ತುಪ್ಪ ಹಾಕಿ, ಒಣ ದ್ರಾಕ್ಶಿ, ಗೋಡಂಬಿ ಹುರಿದು ತೆಗೆಯಿರಿ. ಅದೇ ಬಾಣಲೆಗೆ ಒಂದು ಚಮಚ ತುಪ್ಪ ಹಾಕಿ, ಸಣ್ಣ ಉರಿಯಲ್ಲಿ ಜೋಳದ ಹಿಟ್ಟು ಹುರಿದು ತೆಗೆಯಿರಿ. ಮತ್ತೆ ಒಂದು ಚಮಚ ತುಪ್ಪ ಹಾಕಿ ಗೋದಿ ಹಿಟ್ಟು ಹುರಿದು ತೆಗೆಯಿರಿ. ಹಾಗೆಯೇ ಒಂದು ತುಪ್ಪ ಹಾಕಿ ಗೋದಿ ರವೆ ಹುರಿದು ಇಟ್ಟುಕೊಳ್ಳಿ.
ಬೆಲ್ಲದ ಪುಡಿ ಮಾಡಿ ಅದೇ ಬಾಣಲೆಗೆ ಹಾಕಿ ಸ್ವಲ್ಪ ಬಿಸಿ ಮಾಡಿ ಒಲೆ ಆರಿಸಿ ಇಳಿಸಿ. ಬೆಲ್ಲ ಪೂರ‍್ಣ ಕರಗುವುದೇನೂ ಬೇಡ. ಏಲಕ್ಕಿ ಪುಡಿ ಮಾಡಿ ಸೇರಿಸಿ. ರವೆ, ಒಣ ಕೊಬ್ಬರಿ ತುರಿ, ಹುರಿದ ಹಿಟ್ಟು ಹಾಕಿ ಚೆನ್ನಾಗಿ ಕಲಸಿ, ತಿಕ್ಕಿ ಉಂಡೆ ಕಟ್ಟಿಕೊಳ್ಳಿ. ಹುರಿದ ಗೋಡಂಬಿ, ಒಣ ದ್ರಾಕ್ಶಿ ಸೇರಿಸಿ ಒತ್ತಿ ಕಟ್ಟಿ ಇಟ್ಟುಕೊಳ್ಳಿ. ಬೇಕಾದರೆ ಸ್ವಲ್ಪ ತುಪ್ಪ ಸೇರಿಸಿಕೊಳ್ಳಬಹುದು. ಈಗ ಸ್ವಾದಿಶ್ಟಕರ ಹಾಗೂ ಆರೋಗ್ಯಕರ ಉಂಡೆ ಮಾಡಿಟ್ಟು ಕೊಂಡು ತಿನ್ನಬಹುದು.
ಇತ್ತೀಚಿನ ಅನಿಸಿಕೆಗಳು