ತೊಗರಿಬೇಳೆ ಕಾರಬ್ಯಾಳಿ

–  ಸವಿತಾ.

ಕಾರಬ್ಯಾಳಿ, ಕಾರದ ಬೇಳೆ

ಏನೇನು ಬೇಕು?

  • ತೊಗರಿ ಬೇಳೆ – 1 ಲೋಟ
  • ಟೊಮೆಟೊ – 2
  • ಈರುಳ್ಳಿ – 1
  • ಬೆಳ್ಳುಳ್ಳಿ – 4 ಎಸಳು
  • ಹಸಿ ಶುಂಟಿ – 1/4 ಇಂಚು
  • ಕರಿಬೇವು – 2 ಕಡ್ಡಿ
  • ಕೊತ್ತಂಬರಿ ಸೊಪ್ಪು – 2 ಕಡ್ಡಿ
  • ಹುಣಸೆ ರಸ – 1 ಚಮಚ
  • ಬೆಲ್ಲ – 1 ಚಮಚ
  • ಮಸಾಲೆ ಕಾರ ಇಲ್ಲವೇ ಒಣ ಕಾರ – 3-4 ಚಮಚ
  • ಉಪ್ಪು – ರುಚಿಗೆ ತಕ್ಕಶ್ಟು
  • ಅರಿಶಿಣ ಮತ್ತು ಇಂಗು – ಒಂದು ಚಿಟಿಕೆ

ಮಾಡುವ ಬಗೆ

ತೊಗರಿ ಬೇಳೆ ಮತ್ತು ಟೊಮೆಟೊಗಳನ್ನು ತೊಳೆದು ಕುಕರ್ ನಲ್ಲಿ ಮೂರು ಕೂಗು ಕುದಿಸಿ ಇಳಿಸಿ. ಬೆಳ್ಳುಳ್ಳಿ ಎಸಳು ಮತ್ತು ಹಸಿ ಶುಂಟಿ ಪೇಸ್ಟ್ ಮಾಡಿ, ಈರುಳ್ಳಿ ಸಣ್ಣ ಕತ್ತರಿಸಿ ಇಟ್ಟುಕೊಳ್ಳಿ. ಹುಣಸೆ ಹಣ್ಣನ್ನು ನೀರಿನಲ್ಲಿ ನೆನೆಸಿ ರಸ ತೆಗೆದು ಇಟ್ಟುಕೊಳ್ಳಿ.

ಮೂರು ಚಮಚ ಎಣ್ಣೆ ಬಿಸಿ ಮಾಡಿ ಸಾಸಿವೆ, ಜೀರಿಗೆ, ಕರಿಬೇವು, ಇಂಗು ಸೇರಿಸಿ ಒಗ್ಗರಣೆ ಹಾಕಿಕೊಳ್ಳಿ. ಇದಕ್ಕೆ ಬೆಳ್ಳುಳ್ಳಿ, ಶುಂಟಿ ಪೇಸ್ಟ್ ಹಾಕಿ ಹುರಿದು, ನಂತರ ಕತ್ತರಿಸಿದ ಈರುಳ್ಳಿ ಹಾಕಿ ಹುರಿಯಿರಿ. ಉಪ್ಪು, ಅರಿಶಿಣ, ಒಣ ಕಾರ ಸೇರಿಸಿ. ಕುದಿಸಿದ ಟೊಮೆಟೊ-ಬೇಳೆ ಸೇರಿಸಿ ಚೆನ್ನಾಗಿ ಹುರಿದು, ನೀರು ಸೇರಿಸಿ ಒಂದು ಕುದಿ ಕುದಿಸಿ. ಹುಣಸೆ ರಸ ಮತ್ತು ಬೆಲ್ಲ ಸೇರಿಸಿ ಕೈಯಾಡಿಸಿ, ಒಲೆ ಆರಿಸಿ . ಕತ್ತರಿಸಿದ ಕೊತ್ತಂಬರಿ ಸೊಪ್ಪು ಸ್ವಲ್ಪ ಮೇಲೆ ಹಾಕಿ ಕೈಯಾಡಿಸಿ. ಇಶ್ಟು ಮಾಡಿದರೆ ಜೋಳದ ರೊಟ್ಟಿ, ಅನ್ನದ ಜೊತೆ ಕಲಸಿಕೊಂಡು ತಿನ್ನಲು ಕಾರಬ್ಯಾಳಿ ಸಿದ್ದ.

ಉತ್ತರ ಕರ‍್ನಾಟಕದಲ್ಲಿ ಜೋಳದ ರೊಟ್ಟಿ ಜೊತೆ ಕಾರಬ್ಯಾಳಿ ದಿನನಿತ್ಯ ಊಟಕ್ಕೆ ಬೇಕು.

(ಚಿತ್ರ ಸೆಲೆ: ಸವಿತಾ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: