ಕವಿತೆ: ಮುಂಜಾನೆ ಹೊತ್ತಲ್ಲಿ…

– ವಿನು ರವಿ.

malenadu

ಮುಂಜಾನೆ ಹೊತ್ತಲ್ಲಿ
ಮಸುಕಾದ ಮಬ್ಬಿನಲಿ
ನೀಲ ಮುಗಿಲ ಮಾಲೆಯೊಂದು
ಆಗಸವ ಅಲಂಕರಿಸಿತ್ತು

ತಂಪೆರೆವ ಗಾಳಿಗೆ
ಇಂಪಾದ ಹಕ್ಕಿಗಳ ಹಾಡಿಗೆ
ಅನುರಾಗದಿ ಹೂವೊಂದು
ಕಂಪೆಸೆಯುತ್ತಾ ಅರಳುತ್ತಿತ್ತು

ಕತ್ತಲು ಕರಗದ ಹೊತ್ತಲಿ
ಮೆತ್ತಗೆ ಹೊರಳಿದ ಮೇಗಗಳಲ್ಲಿ
ಇಳೆಯ ಕಡೆಗೆ ಮೊಗವ ಮಾಡಿ
ವರ‍್ಶ ರುತುವ ಕರೆಯುತ್ತಿತ್ತು

( ಚಿತ್ರಸೆಲೆ: wikimedia.org )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: