ಕರಿಬೇವಿನ ಸಾರು

– ಸವಿತಾ.

ಬೇಕಾಗುವ ಸಾಮಾನುಗಳು

ಕರಿ ಬೇವು – 1/2 ಬಟ್ಟಲು
ಬೆಳ್ಳುಳ್ಳಿ ಎಸಳು – 10
ಕರಿ ಮೆಣಸಿನ ಕಾಳು – 1ಚಮಚ
ಜೀರಿಗೆ -1ಚಮಚ
ಕೊತ್ತಂಬರಿ ಕಾಳು – 1/2 ಚಮಚ
ಸಾಸಿವೆ -1/2 ಚಮಚ
ಇಂಗು – 1/4 ಚಮಚ
ಒಣ ಮೆಣಸಿನಕಾಯಿ – 4
ನಿಂಬೆ ಹಣ್ಣು – 1
ಅರಿಶಿಣ – ಸ್ವಲ್ಪ
ಎಣ್ಣೆ – 2 ಚಮಚ
ಉಪ್ಪು – ರುಚಿಗೆ ತಕ್ಕಶ್ಟು

ಮಾಡುವ ಬಗೆ

ಕರಿ ಮೆಣಸಿನ ಕಾಳು, ಜೀರಿಗೆ, ಕೊತ್ತಂಬರಿ ಬೀಜ, ಕರಿ ಬೇವು ಸ್ವಲ್ಪ ಹುರಿದು ಒಲೆ ಆರಿಸಿ. ಆರಿದ ನಂತರ ಮಿಕ್ಸರ್ ನಲ್ಲಿ ಪುಡಿ ಮಾಡಿ ಇಟ್ಟುಕೊಳ್ಳಿ.

ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ, ಸಾಸಿವೆ, ಇಂಗು, ಒಣ ಮೆಣಸಿನಕಾಯಿ ಮುರಿದು ಹಾಕಿ ಹುರಿಯಿರಿ. ಬೆಳ್ಳುಳ್ಳಿ ಎಸಳುಗಳನ್ನು ಜಜ್ಜಿ ಹಾಕಿ ಕೊಂಚ ಹುರಿದು ಕರಿ ಬೇವಿನ ಮಿಶ್ರಣ ಸೇರಿಸಿ. ರುಚಿಗೆ ತಕ್ಕಶ್ಟು ಉಪ್ಪು ಹಾಕಿ. ಸ್ವಲ್ಪ ಅರಿಶಿಣ ಸೇರಿಸಿ. ಎರಡು ಲೋಟ ನೀರು ಹಾಕಿ ಒಂದು ಕುದಿ ಬರುವವರೆಗೆ ಕುದಿಸಿ. ನಿಂಬೆ ಹಣ್ಣಿನ ರಸ ಸೇರಿಸಿ ಕೈಯಾಡಿಸಿ ಒಲೆ ಆರಿಸಿಇಳಿಸಿ. ಬೇಕಾದರೆ ಸ್ವಲ್ಪ ಕೊತ್ತಂಬರಿ ಸೊಪ್ಪು ಕತ್ತರಿಸಿ ಹಾಕಿ. ಈಗ ಕರಿ ಬೇವು ಸಾರು ತಯಾರು. ಅನ್ನದ ಜೊತೆ ಸವಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: