ಹನಿಗವನಗಳು

– ವೆಂಕಟೇಶ ಚಾಗಿ.

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

*** ದಾವಂತ ***

ನಾನು
ಸತ್ತೇ ಹೋಗಿರುವೆ
ನಿನ್ನದೇ ನೆನಪಿನಲಿ
ಮತ್ತೇ
ಬದುಕಿಸುವ ದಾವಂತ
ನಿನಗೇಕೆ ಈ ಸಂಜೆಯಲಿ

*** ಪ್ರಸ್ತುತ ***

ಶಶಿ ಕರಗಿದನೆಂದು
ಮನಸ್ಸು ಮರಗಿತ್ತು
ನಿನ್ನ ಸನಿಹದಲ್ಲಿ
ವಾಸಿಯಾಗದ ನೋವು
ಕರಗದೇ ಉಳಿದಿತ್ತು
ನೀನಿರದೇ,
ಶಶಿ ಇರುವ ಇರುಳಲ್ಲಿ

*** ಕತ್ತಲು ***

ಸುತ್ತಲೂ ಕತ್ತಲಿದ್ದಾಗ
ನಿನ್ನ ಹೆಸರೇ
ಬೆಳಕಾಗಿತ್ತು ಬದುಕಿನಲ್ಲಿ
ಕರಗಿ ಹೋದೆ ಬೆಳಕಲ್ಲಿ
ನಗುತಿರುವೆ
ಮನದ ಕತ್ತಲಲ್ಲಿ

*** ಯಜಮಾನ ***

ನಿನ್ನ ಹ್ರುದಯದರಮನೆಗೆ
ಕಂಡಿತ ನಾನಾಗಲಾರೆ
ಆಳುವ ಯಜಮಾನ
ನನಗೆ ಗೊತ್ತು
ನಿನ್ನ ನಗು ಹೇಳುತಿದೆ
ಕಂಡಿತ ಇದಲ್ಲ
ನಿನ್ನ ಕನಸಿನ ಜಮಾನ

(ಚಿತ್ರಸೆಲೆ : professionalstudies.educ.queensu.ca)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: