ಹನಿಗವನಗಳು

– ವೆಂಕಟೇಶ ಚಾಗಿ.

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

***ತಪ್ಪು***

ಹ್ರುದಯ ಮಾಡಿದ ತಪ್ಪಿಗೆ
ಜೀವನದ ತುಂಬೆಲ್ಲಾ
ಬರೀ ಶಿಕ್ಶೆ ಶಿಕ್ಶೆ
ಈಗಲೇ ಹೇಳಿಬಿಡು
ಕಲ್ಲನ್ನೂ ಕರಗಿಸಿದ
ನಿನ್ನ ನಗುವಿನ ಹಿಂದೆ
ಇತ್ತೇ ?
ಈ ಅಪೇಕ್ಶೆ!

***ತಾಕತ್ತು***

ಸುಂದರ ಬದುಕಿನ
ಬಣ್ಣಗಳಿಗೆ
ಜೀವ ನೀಡುವ ತಾಕತ್ತು
ಕೇವಲ ನಿನ್ನಲ್ಲಿದೆ
ಅಲ್ಲವೇ?
ಆದರೆ ನಿನಗಾಗಿ
ಮಡಿದಿರುವ ಬಣ್ಣಗಳು
ಈಗ ನನ್ನಲ್ಲಿವೆ!

***ಕುರುಡು***

ಈ ಪ್ರೀತಿ ಕರುಡು ಎಂದು
ಬಲ್ಲವರು ಹೇಳಿರಬಹುದು
ಅವರೂ ಬೆಲ್ಲದ ಸವಿ
ಉಂಡವರೇ,
ಅವರೇ ಬರೆದಿರಬಹುದು
ಪ್ರೀತಿ ಸಂವಿದಾನದ
ಕರಡು!

***ಕತ್ತಲು***

ಈ ಇರುಳಿನಲ್ಲಿ ಕತ್ತಲು
ಅದೆಶ್ಟು ಗಾಡವಾಗಿ
ಆವರಿಸಿದೆ ಎಂದರೆ
ಮನದಲ್ಲೂ ಕತ್ತಲಾಗಿದೆ
ಆಗಸದಲ್ಲಿ ಶಶಿ ಇರದೆ
ಮನದಲ್ಲಿ ನೀನಿರದೆ!

(ಚಿತ್ರಸೆಲೆ : professionalstudies.educ.queensu.ca)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: