ಅಣಬೆ ಮಸಾಲೆ

– ನಿತಿನ್ ಗೌಡ.

ಬೇಕಾಗುವ ಸಾಮಾನುಗಳು

  • ಅಣಬೆ – 200 ಗ್ರಾಮ್
  • ಟೋಮೋಟೋ – 2 ( ಚಿಕ್ಕವು )
  • ಈರುಳ್ಳಿ – 2
  • ಜೀರಿಗೆ/ಸೋಂಪು – ಅರ‍್ದ ಚಮಚ
  • ಅರಿಶಿಣ – ಅರ‍್ದ ಚಿಕ್ಕ ಚಮಚ
  • ಕಾರದ ಪುಡಿ – 1.5 ಚಮಚ
  • ಹಸಿ ಮೆಣಸಿನಕಾಯಿ – 2
  • ಬೆಳ್ಳುಳ್ಳಿ – 8 ರಿಂದ 10 ಎಸಳು
  • ಶುಂಟಿ – 1 ಇಂಚು
  • ಎಣ್ಣೆ – ಸ್ವಲ್ಪ
  • ಉಪ್ಪು – ರುಚಿಗೆ ತಕ್ಕಶ್ಟು
  • ಕೊತ್ತಂಬರಿ ಸೊಪ್ಪು – ಚೂರು
  • ಚಕ್ಕೆ – ಇಂಚು
  • ಕಾಯಿ ತುರಿ – ಸ್ವಲ್ಪ
  • ಕಾಳುಮೆಣಸು – 6
  • ಲವಂಗ – 2
  • ಏಲಕ್ಕಿ – 1
  • ಗೋಡಂಬಿ – 4
  • ಚಿಕ್ಕ ಸ್ಟಾರ್ ಮೊಗ್ಗು – 1
  • ದನಿಯಾ – 1- 1.5 ಚಮಚ

ಮಾಡುವ ಬಗೆ:

ಮೊದಲಿಗೆ ಅಣಬೆಯನ್ನು ಸೋಸಿ ಹೆಚ್ಚಿಟ್ಟುಕೊಳ್ಳಿರಿ. ಆಮೇಲೆ ಬಾಣಲೆಗೆ ಕೊಂಚ ಎಣ್ಣೆ ಹಾಕಿ, ಒಂದು ಈರುಳ್ಳಿ, ಟೊಮೋಟೊ, ಬೆಳ್ಳುಳ್ಳಿ, ಶುಂಟಿ, ಏಲಕ್ಕಿ, ಲವಂಗ, ಸೋಂಪು ಕಾಳು, ಕಾಳುಮೆಣಸು, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಕಾಯಿ ತುರಿ, ಸ್ಟಾರ್ ಮೊಗ್ಗು, ಗೋಡಂಬಿ ಹಾಕಿ ಬಾಡಿಸಿಕೊಳ್ಳಿರಿ. ಈಗ ಇದನ್ನು ಆರಲು ಬಿಡಿ ಮತ್ತು ಜೊತೆ ಜೊತೆಗೆ ಇನ್ನೊಂದು ಬಾಣಲೆಗೆ ಕೊಂಚ ಎಣ್ಣೆ ಹಾಕಿ ಕರಿಬೇವು ಮತ್ತು ಇನ್ನೊಂದು ಈರುಳ್ಳಿ ಹಾಕಿಕೊಂಡು ಬಾಡಿಸಿ. ಈಗ ಇದಕ್ಕೆ ಅಣಬೆ, ಅರಿಶಿಣ, ದನಿಯಾ ಪುಡಿ, ರುಚಿಗೆ ತಕ್ಕಶ್ಟು ಮತ್ತು ಕಾರದ ಪುಡಿ ಹಾಕಿ ನಡು ಉರಿಯಲ್ಲಿ ಬಾಡಿಸಿ. ಅಣಬೆಗೆ ಮೊದಲಿಗೆ ನೀರು ಹಾಕುವುದು ಬೇಡ, ಏಕೆಂದರೆ ಅಣಬೆ ನೀರೊಡೆದುಕೊಳ್ಳುತ್ತದೆ. 2-3 ನಿಮಿಶ ಬಾಡಿಸಿದರೆ ಸಾಕು. ಈಗ ಇದು ಬಾಡುವ ಹೊತ್ತಲ್ಲಿ, ಈ ಮೊದಲು ಬಾಡಿಸಿಟ್ಟುಕೊಂಡದ್ದನ್ನು ನುಣ್ಣಗೆ ರುಬ್ಬಿಕೊಳ್ಳಿ( ದಪ್ಪನೆಯ ಗಸಿ ಬೇಕಾದಲ್ಲಿ, ಇನ್ನೊಂದೆರಡು ಗೋಡಂಬಿ ಹಾಕಿಕೊಳ್ಳಬಹುದು) . ಈಗ ಈ ರುಬ್ಬಿಟ್ಟುಕೊಂಡ ಮಸಾಲೆಯನ್ನು ಬಾಣಲೆಗೆ ಹಾಕಿ, ಚೂರು ನೀರು ಹಾಕಿ, ಮಸಾಲೆಯ ಹಸಿ ಗಮ ಹೋಗುವವರೆಗೆ ಬೇಯಿಸಿರಿ. ಇದನ್ನು ಚೆಂದಕಾಣಿಸಲು ಬೇಕಾದಲ್ಲಿ ಕೊತ್ತಂಬರಿ ಸೊಪ್ಪು ಉದುರಿಸಿಕೊಳ್ಳಬಹುದು. ಈಗ ಸೊಗಸಾದ ಅಣಬೆ ಮಸಾಲೆ ಸವಿಯಲು ಸಿದ್ದವಾಗಿದೆ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: