ಹುಣಸೆ ಅನ್ನ
– ಸವಿತಾ.
ಬೇಕಾಗುವ ಸಾಮಾನುಗಳು
- ಅಕ್ಕಿ – 1 ಲೋಟ
- ಹುಣಸೆ ಹಣ್ಣು – ನಿಂಬೆ ಗಾತ್ರ
- ಬೆಲ್ಲ – 3 ಚಮಚ
- ಎಣ್ಣೆ – 4 ಚಮಚ
- ಕಡಲೇ ಬೇಳೆ – 1 ಚಮಚ
- ಉದ್ದಿನ ಬೇಳೆ – 1 ಚಮಚ
- ಕರಿಬೇವು ಎಲೆ – 20
- ಸಾಸಿವೆ – ಅರ್ದ ಚಮಚ
- ಇಂಗು ಸ್ವಲ್ಪ
- ಉಪ್ಪು ರುಚಿಗೆ ತಕ್ಕಶ್ಟು
- ಅರಿಶಿಣ ಪುಡಿ ಸ್ವಲ್ಪ
- ಕಡಲೇ ಬೀಜ – 2 ಚಮಚ
- ಕರಿ ಮೆಣಸಿನ ಕಾಳು – 1 ಚಮಚ
- ಎಳ್ಳು – 2 ಚಮಚ
- ಜೀರಿಗೆ – 1 ಚಮಚ
- ಮೆಂತೆ ಕಾಳು – 1 ಚಮಚ
- ಒಣ ಮೆಣಸಿನಕಾಯಿ – 3
- ಒಣ ಕಾರದ ಪುಡಿ – 1 ಚಮಚ
ಮಾಡುವ ಬಗೆ
ಮೊದಲಿಗೆ ಅನ್ನ ಮಾಡಿಟ್ಟುಕೊಳ್ಳಿರಿ. ಹುಣಸೆ ನೆನೆಸಿ ರಸ ತೆಗೆದಿಟ್ಟುಕೊಳ್ಳಿರಿ. ಆಮೇಲೆ ಜೀರಿಗೆ, ಕರಿ ಮೆಣಸಿನ ಕಾಳು, ಮೆಂತೆ ಕಾಳು ಹುರಿದು ಪುಡಿ ಮಾಡಿ. ಎಳ್ಳು ಹುರಿದು ಪುಡಿ ಮಾಡಿ ಇಟ್ಟುಕೊಳ್ಳಿ.
ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ; ಸಾಸಿವೆ, ಇಂಗು, ಒಣ ಮೆಣಸಿನ ಕಾಯಿ, ಕಡಲೇಬೇಳೆ, ಉದ್ದಿನ ಬೇಳೆ, ಕರಿಬೇವು ಮತ್ತು ಕಡಲೇ ಬೀಜ ಹಾಕಿ ಹುರಿಯಿರಿ. ಹುಣಸೆ ರಸ, ಬೆಲ್ಲ, ಉಪ್ಪು, ಒಣ ಕಾರದ ಪುಡಿ ಮತ್ತು ಅರಿಶಿಣ ಪುಡಿ ಹಾಕಿ ಸ್ವಲ್ಪ ಕುದಿಸಿ. ಜೀರಿಗೆ ಮೆಂತೆ ಕರಿಮೆಣಸಿನ ಪುಡಿ ಮತ್ತು ಎಳ್ಳು ಪುಡಿ ಹಾಕಿ ಚೆನ್ನಾಗಿ ತಿರುಗಿಸಿ ಒಲೆ ಆರಿಸಿ ಇಳಿಸಿ. ಕೊನೆಗೆ ಇದಕ್ಕೆ ಮಾಡಿಟ್ಟುಕೊಂಡ ಅನ್ನ ಹಾಕಿ ಚೆನ್ನಾಗಿ ಕಲಸಿರಿ. ಈಗ ಹುಣಸೆ ಅನ್ನ ಸವಿಯಲು ಸಿದ್ದವಾಗಿದೆ.
ಇತ್ತೀಚಿನ ಅನಿಸಿಕೆಗಳು